ನೀವೆಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಓದಿದ ನೋಡಿದ ಹಂಚಿದ ಮರುಗಿದ ಏಳು ಶಿಕ್ಷಕರು ಸೇರಿದಂತೆ ಒಂಬತ್ತು ಮಂದಿಯನ್ನು ಸಾವಿನ ಕಡೆ ನೂಕಿದ ಕೇರಳ ತಮಿಳುನಾಡು ಗಡಿಯ ವಾಲ್ಪಾರೈ ದುರಂತದಲ್ಲಿ ಟೆಂಪೋ ಟ್ರಾವೆಲರ್ ಚಾಲಕನಾಗಿದ್ದವನು ಈ ಹುಡುಗ. ಸಣ್ಣ ಪ್ರಾಯದ ಈತ ಈಗ ಬದುಕಿದ್ದಾನಾ ಈ ಬಗ್ಗೆ ಒಂದು ವರದಿ.








ಈ ಸಮಯದಲ್ಲಿ ಈತನ ಬಗ್ಗೆ ಟೀಕೆಗಳು ಅಥವಾ ದೋಷಾರೋಪಣೆಗಳಲ್ಲ ಮುಖ್ಯ, ವಾಹನ ಎಂದ ಮೇಲೆ ತಾಂತ್ರಿಕ ಸಮಸ್ಯೆಗಳೂ ಇದ್ದಿರಬಹುದು, ಮನುಷ್ಯ ಎಂದ ಮೇಲೆ ನಿದ್ರೆಯೂ ಅವರಿಸಬಹುದು. ಜಾಗರೂಕರಾಗಿರಬೇಕಿತ್ತು ನಿಜ. ಆಗಿ ಹೋಯಿತು.
ಅಷ್ಟಕ್ಕೂ ಈ ಡ್ರೈವರ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಅವನ ಪ್ರಾಣ ಉಳಿಯಲಿ ಎಂದು ಹಾರೈಸುವುದು ನಮಗೆ ಮುಖ್ಯವಾಗಿದೆ.ಅವನ ವಯಸ್ಸು ಅವನು ಮಾಡುತ್ತಿದ್ದ ಕೆಲಸಕ್ಕೆ ಅಡ್ಡಿಯಾಗಿದೆ ಎಂದು ಅನಿಸುವುದಿಲ್ಲ. ಯಾಕೆಂದರೆ, ಈ ಚಿಕ್ಕ ವಯಸ್ಸಿನಲ್ಲೂ ಅವನು ತನ್ನ ಕುಟುಂಬದ ಜವಾಬ್ದಾರಿ ಹೊತ್ತು, ಅವರಿಗಾಗಿ ದುಡಿಯಲು ಈ ವಾಹನವನ್ನು ಚಲಾಯಿಸಿಕೊಂಡು ವಾಲ್ಪಾರೈಗೆ ಬಂದಿದ್ದನು. ಆದರೆ ವಿಧಿ ಆಟ ಬೇರೆಯೇ ಆಗಿತ್ತು; ಎಲ್ಲರ ಪ್ರಾಣವನ್ನೂ ಕಿತ್ತುಕೊಂಡ ವಿಧಿ, ಇವನ ಜೀವವನ್ನು ಮಾತ್ರ ಉಳಿಸಿದೆ. ಅಂದು ಆ ಟೆಂಪೋ ಟ್ರಾವೆಲರ್‌ಗೆ ನಿಜವಾಗಿ ಏನಾಯಿತು ಎಂದು ಹೇಳಲು ಈಗ ಅವನೊಬ್ಬನಿಂದ ಮಾತ್ರ ಸಾಧ್ಯ.
ಅವನು ಗುಣಮುಖನಾಗಿ ಮರಳಿ ಬಂದರೆ ಮಾತ್ರ ಅಂದು ಅಲ್ಲಿ ನಡೆದ ಘಟನೆಗಳ ಬಗ್ಗೆ ಜನರಿಗೆ ಸ್ಪಷ್ಟವಾದ ಮಾಹಿತಿ ತಿಳಿಯಲು ಸಾಧ್ಯವಾಗುತ್ತದೆ. ಒಂದು ವೇಳೆ ವಾಹನದಲ್ಲಿ ತಾಂತ್ರಿಕ ದೋಷವಿದ್ದರೆ, ಅವನನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಎಷ್ಟೇ ಅನುಭವವಿರುವ ಚಾಲಕನಾಗಿದ್ದರೂ ಸಹ, ಕೆಲವೊಮ್ಮೆ ಪರಿಸ್ಥಿತಿ ಕೈಮೀರಿ ಹೋಗುತ್ತದೆ. ವಾಹನ ಚಲಾಯಿಸುವವರಿಗೆ ಅದರ ಅನುಭವ ಇರುತ್ತದೆ. ಅದು ಅವರ ತಪ್ಪಾಗಿರುವುದಿಲ್ಲ. ಅಂದು ಅಲ್ಲಿ ಏನಾಯಿತು ಎಂಬುದು ಅವನಿಗೆ ಮಾತ್ರ ತಿಳಿದಿದೆ. ಆದ್ದರಿಂದ ಟೀಕೆಗಳನ್ನು ಬಿಟ್ಟು, ಅವನು ಬೇಗ ಗುಣಮುಖನಾಗಲಿ ಎಂದು ಪ್ರಾರ್ಥಿಸೋಣ.

