ಅರಂತೋಡು: ಬದ್ರಿಯಾ ಜುಮಾ ಮಸೀದಿ ಮತ್ತು ದಿಕ್ರ್ ಸ್ವಲಾತ್ ಸಮಿತಿ ಅರಂತೋಡು ಇದರ ಸಂಯುಕ್ತ ಆಶ್ರಯದಲ್ಲಿ 22ನೇ ವರ್ಷದ ವಾರ್ಷಿಕ ದಿಕ್ರ್ ಸ್ವಲಾತ್ ಮಜಿಲಿಸ್ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಅರಂತೋಡು ಮಸೀದಿಯಲ್ಲಿ ಸತತ 35 ವರ್ಷಗಳ ಕಾಲ ಖತೀಬರಾಗಿ ಸೇವೆ ಸಲ್ಲಿಸಿ ಇಹಲೋಕ ತ್ಯಜಿಸಿದ ಮರ್ ಹೂಮ್ ಡಾ| ಕೆ.ಎಂ. ಶಾಹ್ ಮುಸ್ಲಿಯಾರ್ ರವರ 7ನೇ ವರ್ಷದ ಅನುಸ್ಮರಣಾ ಕಾರ್ಯಕ್ರಮವೂ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮವು ಎಪ್ರಿಲ್ 30ರಂದು ಅರಂತೋಡು ಜುಮಾ ಮಸೀದಿ ವಠಾರದಲ್ಲಿ ಜರುಗಲಿದೆ.
ದಿಕ್ರ್ ಸ್ವಲಾತ್ ಮಜಿಲಿಸ್‌ನ ನೇತೃತ್ವವನ್ನು ಸ್ವಲಾತ್ ಸಮಿತಿಯ ಗೌರವಾಧ್ಯಕ್ಷರಾದ ಅಸ್ಸಯ್ಯದ್ ಅಲ್ ಹಾಜ್ ಎನ್.ಪಿ.ಎಂ. ಝೈನುಲ್ ಆಬಿದೀನ್ ತಂಗಳ್ ದುಗ್ಗಲಡ್ಕ ಅವರು ವಹಿಸಲಿದ್ದಾರೆ. ಕಾರ್ಯಕ್ರಮದ ಆರಂಭದಲ್ಲಿ ಅರಂತೋಡು ಜುಮಾ ಮಸೀದಿಯ ಖತೀಬರಾದ ಆಸಿಫ್ ಅಝ್ ಹರಿ ಅವರು ದುವಾ ನೆರವೇರಿಸಲಿದ್ದಾರೆ.




ಪೇರಡ್ಕ ಮುಹಿಧೀನ್ ಜುಮಾ ಮಸೀದಿಯ ಖತೀಬರಾದ ಅಹ್ಮದ್ ನಈಮ್ ಪೈಝಿ ಅಲ್ ಮಅಬರಿ ಅವರು ಮರ್ ಹೂಮ್ ಡಾ| ಕೆ.ಎಂ. ಶಾಹ್ ಮುಸ್ಲಿಯಾರ್ ಅವರ ಸುದೀರ್ಘ ಸೇವೆ ಮತ್ತು ಜೀವನದ ಕುರಿತು ಅನುಸ್ಮರಣಾ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ಮುಖ್ಯ ಪ್ರಭಾಷಣವನ್ನು ಮುಹಮ್ಮದ್ ಆಸಿಫ್ ಅಝ್ ಹರಿ ನಾಟೆಕಲ್ ಅವರು ನಡೆಸಿಕೊಡಲಿದ್ದಾರೆ.





ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿಯ ಅಧ್ಯಕ್ಷರು ಹಾಗೂ ಸಚಿವ ದರ್ಜೆಯ ಗೌರವ ಹೊಂದಿರುವ ಟಿ.ಎಂ. ಶಹೀದ್ ತೆಕ್ಕಿಲ್ ಅವರು ಆಗಮಿಸಲಿದ್ದಾರೆ. ಇವರೊಂದಿಗೆ ಹಲವಾರು ಧಾರ್ಮಿಕ, ಸಾಮಾಜಿಕ ರಂಗದ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ ಎಂದು ಅರಂತೋಡು ಜುಮಾ ಮಸೀದಿಯ ಅಧ್ಯಕ್ಷರಾದ ಅಶ್ರಫ್ ಗುಂಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

