ಕಾಡುಬಳಗದಿಂದ ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕ ಪ್ರದರ್ಶನ: ರಂಗಾಸಕ್ತರಿಗೆ ಆಹ್ವಾನ

ಪುತ್ತೂರು: ಪ್ರಕಾಶ್ ರಾಜ್ ಪ್ರಸ್ತುತಪಡಿಸುತ್ತಿರುವ ಹಾಗೂ ಪುತ್ತೂರಿನ ಕಾಡುಬಳಗದ ಆಯೋಜನೆಯಲ್ಲಿ ‘ನಿರ್ದಿಗಂತ’ ತಂಡದಿಂದ ಅಭಿನಯಿಸಲ್ಪಡುವ ವಿಭಿನ್ನ ನಾಟಕ ‘ಪ್ರಾಜೆಕ್ಟ್ ಪಂಚತಂತ್ರ’ ಅಕ್ಟೋಬರ್ 20 ರ ಮಂಗಳವಾರದಂದು ಸಂಜೆ 6:30 ಗಂಟೆಗೆ ಪ್ರದರ್ಶನಗೊಳ್ಳಲಿದೆ.

ಪಂಚತಂತ್ರ ಕಥೆಗಳನ್ನು ಆಧರಿಸಿ ಅರುಣ್ ಲಾಲ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ವಿಭಿನ್ನ ನಾಟಕವು ಪುತ್ತೂರಿನ ನೆಹರು ನಗರದಲ್ಲಿರುವ ‘ಕಾಡು ಬಯಲು ರಂಗಮಂದಿರ’ದಲ್ಲಿ ಪ್ರದರ್ಶನಗೊಳ್ಳಲಿದೆ.

ನಾಟಕಕ್ಕೆ ಉಚಿತ ಪ್ರವೇಶವಿದ್ದು, ಎಲ್ಲಾ ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕಾಡುಬಳಗದ ರಾಘವೇಂದ್ರ ಹಾಲ್ಕೆರೆ ಮತ್ತು ತಂಡದವರು ಕೋರಿದ್ದಾರೆ.

ನಾಟಕದ ಹೆಸರು: ಪ್ರಾಜೆಕ್ಟ್ ಪಂಚತಂತ್ರ
ಸಂಘಟನೆ: ಕಾಡುಬಳಗ, ಪುತ್ತೂರು
ನಿರ್ದೇಶನ: ಅರುಣ್ ಲಾಲ್
ತಂಡ: ನಿರ್ದಿಗಂತ ತಂಡ
ದಿನಾಂಕ: ಅಕ್ಟೋಬರ್ 20, ಮಂಗಳವಾರ
ಸಮಯ: ಸಂಜೆ 6:30ಕ್ಕೆ
ಸ್ಥಳ: ಕಾಡು ಬಯಲು ರಂಗಮಂಟಪ, ನೆಹರು ನಗರ, ಪುತ್ತೂರು

ನಿಮ್ಮದೊಂದು ಉತ್ತರ

Discover more from

Subscribe now to keep reading and get access to the full archive.

Continue reading