ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ನೆಲ್ಲಿಕುಮೇರಿ ಕಲ್ಲುಗುಂಡಿ ಇದರ 14 ನೇ ವರ್ಷದ ನವರಾತ್ರಿ ಉತ್ಸವದ ಪ್ರಯುಕ್ತ ಎರಡನೇ ದಿನದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಜನಾ ಸೇವೆ ಮತ್ತು ದೇವಸ್ಥಾನಕ್ಕೆ ಸಂಬಂಧಿಸಿದಂತೆ ಅಹರ್ನಿಶಿ ದುಡಿದ ಮಹನೀಯರುಗಳನ್ನು ಗುರುತಿಸಿ ಸನ್ಮಾಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀ ರಾಮಚಂದ್ರ ಕಲ್ಲುಗದ್ದೆ ವಹಿಸಿದ್ದರು.ವೇದಿಕೆಯಲ್ಲಿ ಗೌರವ ಸಲಹೆಗಾರ ಶ್ರೀ ಪದ್ಮಯ್ಯ b.r, ಬ್ರಹ್ಮಕಲಶ ಸಮಿತಿಯ ಪ್ರ.ಕಾರ್ಯದರ್ಶಿ ಶ್ರೀ ವಸಂತ ಪೆಲ್ತಡ್ಕ,ಮೊಕ್ತೇಸರ ಶ್ರೀ ಪಳನಿವೇಲು,ದೇವಸ್ಥಾನ ಅಧ್ಯಕ್ಷ ಶ್ರೀ ಜ್ನಾನಶೀಲನ್ ರಾಜು,e v ಪ್ರಶಾಂತ್ ಮತ್ತು ಶ್ರೀ ಯೋಗೀಶ್ವರ್ ಉಪಸ್ಥಿತರಿದ್ದರು.ಊರ ಮತ್ತು ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು. ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.





