ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ನೆಲ್ಲಿಕುಮೇರಿ ಕಲ್ಲುಗುಂಡಿ ಇದರ 14 ನೇ ವರ್ಷದ ನವರಾತ್ರಿ ಉತ್ಸವದ ಪ್ರಯುಕ್ತ ಮೂರನೇ ದಿನದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಜನಾ ಸೇವೆ ಮತ್ತು ಶಿವಂ ಆರ್ಕೆಸ್ಟ್ರ ಕಾಸರಗೊಡು ಇವರಿಂದ ಸಂಗೀತ ರಸಮಂಜರಿ ನಡೆಯಿತು.ಈ ಸಂಧರ್ಭದಲ್ಲಿ ಆರ್ಕೆಸ್ಟ್ರ ತಂಡದವರು 2007 ಮತ್ತು 2025 ರಲ್ಲಿ ಎರಡು ಬಾರಿ ಬ್ರಹ್ಮಕಲಶ ನಡೆಸಿದ ಮತ್ತು ಪಾರದರ್ಶಕ ಆಡಳಿತ ನಡೆಸಿರುವ ದೇವಸ್ಥಾನ ಅಧ್ಯಕ್ಷ ಶ್ರೀ ಜ್ನಾನಶೀಲನ್ ರಾಜು,ಅವರನ್ನು ಸನ್ಮಾನಿಸಲಾಯಿತು.ಆಡಳಿತ ಮಂಡಳಿಯವರು,ಮೊಕ್ತೇಸರರು ,ಊರ ಮತ್ತು ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು. ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.






