ಮಂಡೆಕೋಲು ಗುರುವಮೊಟ್ಟೆಯಲ್ಲಿ ತಾಜುಲ್ ಉಲಮಾ-ನೂರುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮ ಸಂಪನ್ನ

ಮಂಡೆಕೋಲು ಗುರುವಮೊಟ್ಟೆ ಪಾಲಾಂ ಹೌಸ್ ನಲ್ಲಿ ಇಂದು (11-10-2026) ತಾಜುಲ್ ಉಲಮಾ, ನೂರುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮವು ಭಕ್ತಿ ಪೂರ್ವಕವಾಗಿ ನೆರವೇರಿತು.

KMJ, SYS, SSF ಮಂಡೆಕೋಲು ಶಾಖೆಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ಲಾ ಸಖಾಫಿ ಪಾಲಾಂ ವಹಿಸಿದ್ದರು.

ಮುಖ್ಯ ಪ್ರಭಾಷಕರಾಗಿ ಆಗಮಿಸಿದ್ದ ಶಾಕಿರ್ ಬಾಖವಿ ಮಂಬಾಡ್ ಅವರು ತಾಜುಲ್ ಉಲಮಾ ಅವರ ತ್ಯಾಗಮಯ ಜೀವನ ಮತ್ತು ಸಮಸ್ತದ ಸೇವೆಯ ಕುರಿತು ಪ್ರಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಸಯ್ಯದ್ ಉಮರ್ ಜಿಫ್ರಿ ಹನಿಫಿ ತಂಘಲ್ ಪಾಂಡಿ ಮತ್ತು ಸಯ್ಯದ್ ಹುಸೈನ್ ತಂಘಲ್ ಆದೂರು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ದುಃಹ ನೇತೃತ್ವ
ಸಯ್ಯದ್ ಉಮರ್ ಜಿಫ್ರಿ ಹನಿಫಿ ತಂಘಲ್ ಪಾಂಡಿ
ಹುಸೈನ್ ತಂಘಲ್ ಆದೂರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ 2027 ಜನವರಿ 28,29,30,31 ರಂದು ನಡೆಯಲಿರುವ ಸಮಸ್ತ ಶತಾಬ್ದಿ ಸಮ್ಮೇಳನದ ಪ್ರಚಾರವನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮಹಲ್ಲಿನ ಹಿರಿಯರು, ಉಲಮಾಗಳು, SYS, SSF ಕಾರ್ಯಕರ್ತರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು. ಸಲಾತ್, ದುಆ ಮತ್ತು ತಬರ್ರುಕ್ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿದೆ
ಅಶ್ರಫ್ ಮಂಡೆಕೋಲು

ನಿಮ್ಮದೊಂದು ಉತ್ತರ

Discover more from

Subscribe now to keep reading and get access to the full archive.

Continue reading