

SJM ಕರ್ನಾಟಕ ರಾಜ್ಯ ಸಮಿತಿ ಹಮ್ಮಿಕೊಂಡ ಪ್ರತಿಭೋತ್ಸವ 2026 ರ ಬೆಳ್ಳಾರೆ ರೇಂಜ್ ಮಟ್ಟದ ಪ್ರತಿಭೋತ್ಸವವನ್ನು ನವೆಂಬರ್ 22 ಆದಿತ್ಯವಾರ ದಾರುಲ್ ಹುದಾ ತಂಬಿನಮಕ್ಕಿ ಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇದರ ಸ್ವಾಗತ ಸಮಿತಿ ರಚನೆಯು ದಾರುಲ್ ಹುದಾ ತಂಬಿನಮಕ್ಕಿಯಲ್ಲಿ ನಡೆಯಿತು.
ಚೆಯರ್ಮಾನ್ ಆಗಿ ಯೂಸುಫ್ ಮುಸ್ಲಿಯಾರ್ ಬೆಳ್ಳಾರೆ , ಜನರಲ್ ಕನ್ವೀನರ್ ಶರೀಫ್ ನಿಂತಿಕಲ್ಲು ಮತ್ತು ಫೈನಾನ್ಸ್ ಕನ್ವೀನರ್ ಅಯ್ಯೂಬ್ ತಂಬಿನಮಕ್ಕಿಯವರನ್ನು ನೇಮಿಸಲಾಯಿತು.
ಹನೀಫ್ ಮುಸ್ಲಿಯಾರ್ ಪೆರುವಾಜೆ, ದಾವೂದ್ ಪಳ್ಳಿಮಜಲು ಮತ್ತು ಶಾಫಿ ಮೊಗಪ್ಪೆ ವೈಸ್ ಚೆಯರ್ಮಾನ್ ಆಗಿಯೂ , ಹನೀಫ್ ಹಾಜಿ ಇಂದ್ರಾಜೆ , ರಫೀಕ್ ಸಿ.ಎಮ್ ಐವತ್ತೊಕ್ಲು, ಹುಸೈನ್ ಸಖಾಫಿ ಇಂದ್ರಾಜೆ ರಫೀಕ್ ಟಿ.ಎಸ್ ಎಣ್ಮೂರು ವೈಸ್ ಕನ್ವೀನರ್ ಗಳಾಗಿಯೂ ನೇಮಕಗೊಂಡರು.
ದಾರುಲ್ ಹುದಾ ಸಂಸ್ಥೆ ಸಾರಥಿ ಖಲೀಲ್ ಹಿಮಮಿ ಉಸ್ತಾದ್, ಅಬ್ದುಲ್ ರಝಾಕ್ ಕೊಲ್ತಂಗರೆ, ಅಬ್ದುಲ್ಲಾ ಪಂಜಿಕಾರ್,ಅಬೂಬಕರ್ ಇಂದ್ರಾಜೆ,ಉಮರ್ ಚೆಕ್ಕಡ್ಕ, ತಾಜುದ್ದೀನ್ ಪಳ್ಳಿಮಜಲು, ಅಬ್ದುಲ್ ರಹ್ಮಾನ್ ನಿಂತಿಕಲ್ಲು, ಇಮ್ತಿಯಾಜ್ ಎಣ್ಮೂರು, ಝಕರಿಯಾ ನಿಂತಿಕಲ್ಲು, ಅಬ್ದುಲ್ ಖಾದರ್ ಪಂಜಿಗಾರ್, ಶಾಫಿ ಪಳ್ಳಿಮಜಲು ಸೇರಿದಂತೆ ಉಮರಾ ನೇತಾರರು ಉಪಸ್ಥಿತರಿದ್ದರು
SJM ಬೆಳ್ಳಾರೆ ರೇಂಜ್ ಅಧ್ಯಕ್ಷರು ಅಬ್ದುಲ್ಲಾ ಮದನಿ ಎಣ್ಮೂರು ಅವರ ಅಧ್ಯಕ್ಷತೆಯಲ್ಲಿ ಜಹಫರ್ ಸಅದಿ ನಿಂತಿಕಲ್ಲು ರವರು ಪ್ರಾಸ್ತಾವಿಕ ಮಾತನ್ನಾಡಿದರು. ಅಬ್ದುಲ್ ಅಝೀಝ್ ಸಅದಿ ಮುಚ್ಚಿಲ ಸ್ವಾಗತಿಸಿ ಶರೀಫ್ ನಿಂತಿಕಲ್ಲು ಸಭೆಯನ್ನು ವಂದಿಸಿದರು.

