
ತುಮರಿ: ‘ಹಾ.ಮ. ಭಟ್ಟ ನೆನಪಿನ ಹಬ್ಬ’ದ ಎರಡನೇ ದಿನದ ಕಾರ್ಯಕ್ರಮವು ನವೀಕರಣಗೊಂಡ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಬೆಳಿಗ್ಗೆ 9:30ಕ್ಕೆ ಪ್ರಾರಂಭವಾಗಿ ‘ಹೊಸ ತಲೆಮಾರಿನ ಕಾವ್ಯಾಭಿವ್ಯಕ್ತಿ’ ಎಂಬ ಕವಿಗೋಷ್ಠಿಯೊಂದಿಗೆ ಯಶಸ್ವಿಯಾಗಿ ನೆರವೇರಿತು.
ಈ ಗೋಷ್ಠಿಯ ಅಧ್ಯಕ್ಷತೆಯನ್ನು ಆನಂದ್ ಋಗ್ವೇದಿ ವಹಿಸಿದ್ದರೆ, ಉದಯ್ ಇಟಗಿ ಕಾರ್ಯಕ್ರಮ ನಿರ್ವಹಿಸಿದರು. ಕವಿಗಳಾದ ರಮ್ಯ ಕೆ. ಜಿ. ಮೂರ್ನಾಡು, ಶಂಕರ್ ಎನ್. ಕೆಂಚನೂರು, ಪ್ರವರ ಕೊಟ್ಟೂರು, ನಟರಾಜ್ ಎಂ. ವಿ., ಛಾಯಾ ಶ್ರೀಧರ್, ಮಧು ರಾಣಿ, ಜಯಶಂಕರ್ ಹಲಗೂರು, ಪದ್ಮಾ ಟಿ. ಚಿನ್ಮಯಿ ಹಾಗೂ ವಿಶಾಲ್ ಮ್ಯಾಸರ ಅವರು ಪ್ರಸ್ತುತ ದಿನಮಾನಗಳ ಕಾವ್ಯ ತಲ್ಲಣಗಳ ಕುರಿತು ಗಂಭೀರ ಸಂವಾದ ನಡೆಸಿ, ತಮ್ಮ ಆಯ್ದ ಕವಿತೆಗಳನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ಅಭಿವ್ಯಕ್ತಿ ಬಳಗ ತುಮರಿಯ ಅಧ್ಯಕ್ಷರಾದ ರಘು ಹಾಲ್ಕೆರೆ, ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕಾವ್ಯಾಸಕ್ತರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

