ಹಾ.ಮ. ಭಟ್ಟ ನೆನಪಿನ ಹಬ್ಬ ಮತ್ತು ನವೀಕರಣಗೊಂಡ ಶಾಂತವೇರಿ ಗೋಪಾಲಗೌಡ ರಂಗಮಂದಿರದ ಉದ್ಘಾಟನಾ ಕಾರ್ಯಕ್ರಮವು 03/10/2026 ರಂದು ತುಮರಿಯಲ್ಲಿ ನೆರವೇರಿತು ರಂಗಮಂದಿರದ ಉದ್ಘಾಟನೆಯನ್ನು ಕೇರಳಂ ರಾಜ್ಯದ
ಪ್ರವಾಸೋದ್ಯಮ ಸಿನೇಮಾ ಮತ್ತು ಸಂಸ್ಕೃತಿ ಮಂತ್ರಿ ವಿಷ್ಣುನಾಥನ್ ಮತ್ತು ಕರ್ನಾಟಕದ ಶೃಂಗೇರಿ ಶಾಸಕರಾದ T D ರಾಜೇಗೌಡ ನೆರವೇರಿಸಿದರು ಜೊತೆಗೆ ಅಭಿವ್ಯಕ್ತಿ ಬಳಗ ತುಮರಿಯ ಅಧ್ಯಕ್ಷರಾದ ಲೋಕಪಾಲ್ ಜೈನ್ ಮತ್ತು ಕಾರ್ಯದರ್ಶಿ ರಘು ಹಾಲ್ಕೆರೆ ಅವರ ಪತ್ನಿ ವಿಧೂಷಿ ವೀಣಾ ಮತ್ತು ಕುಟುಂಬಸ್ತರು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಖ್ಯಾತ ಸಾಹಿತಿ ಎಲ್ ಎನ್ ಮುಕುಂದ ರಾಜ್ ಕರ್ನಾಟಕದ ಖ್ಯಾತ ವಾಗ್ಮಿ ಸುಧೀರ್ ಕುಮಾರ್ ಮರೋಳಿ ಖ್ಯಾತ ಸಾಹಿತಿ ಸವಿತಾ ನಾಗಭೂಷಣ್ ಕೆ ಜಿ ಕೃಷ್ಣಮೂರ್ತಿ ಕಿನ್ನರ ಮೇಳ ತುಮರಿ, ಹಿರಿಯ ಸಮಾಜವಾದಿ ನಾಯಕ ಜಯಂತ್ ,ಖ್ಯಾತ ರಂಗ ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ,ಮತ್ತಿತರ ಸಾಹಿತ್ಯ ಸಂಸ್ಕೃತಿ ಆಸಕ್ತರು ಮತ್ತು ತುಮರಿ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಉದ್ಘಾಟನಾ ಕಾರ್ಯಕ್ರಮದ ನಂತರ ಕರ್ನಾಟಕ ಕಂಡ ಮಹಾನ್ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲ ಗೌಡರ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಪಾರ್ಚನೆ ಮಾಡಲಾಯಿತು




