ಎಲಿಮಲೆಯ ಕಾರು ಗುಂಡ್ಯದಲ್ಲಿ ಅಪಘಾತವಾಗಿ ಇಬ್ಬರು ಗಾಯಗೊಂಡಿರುವ ಮತ್ತು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ.
ಎಲಿಮಲೆಯ ಹರ್ಷಿತ್ ಮತ್ತು ಕಿಶನ್ ಮಾವಿನಕಟ್ಟೆ(ಕವನ) ಅವರು ಪಯಣಿಸುತ್ತಿದ್ದ ಕಾರು ಗುಂಡ್ಯದಲ್ಲಿ ಅಪಘಾತ ಸಂಭವಿಸಿದ್ದು ಗಂಭೀರ ಗಾಯಗಳಾಗಿರುವ ಬಗ್ಗೆ ವರದಿಯಾಗಿದೆ.ಮಿಲಿಟರಿಯಲ್ಲಿ ಸೇವೆಯಲ್ಲಿದ್ದ ಹರ್ಷಿತ್ ಗೆ ಸರ್ಜರಿಯ ಅವಶ್ಯಕತೆ ಇದ್ದು ಜತೆಗಿದ್ದ ಕಿಶನ್ ಪರಿಸ್ಥಿತಿ ಗಂಭೀರ ಇದೆ ಎಂದು ತಿಳಿದು ಬಂದಿದೆ. ಹರ್ಷಿತ್ ಇತ್ತೀಚೆಗಷ್ಟೇ ಅಲ್ಪದಿನದ ರಜೆಯಲ್ಲಿ ಬಂದಿದ್ದರು ಎಂದು ತಿಳಿದು ಬಂದಿದೆ.





