ಸುಳ್ಯ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ದೇವರಕೊಲ್ಲಿಯಲ್ಲಿ ಲಾರಿ ಮಗುಚಿ ಬಿದ್ದು  ಅಪಘಾತ:  ಮಗು ಸಹಿತ ಐವರಿಗೆ ಗಾಯ

ಸುಳ್ಯ: ಸುಳ್ಯ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ದೇವರಕೊಲ್ಲಿ ಎಂಬಲ್ಲಿ  ಟೆಂಪೋ ಟ್ರಾವೆಲರ್ ಮೇಲೆ ಲಾರಿಯೊಂದು ಮಗುಚಿ ಬಿದ್ದ ಪರಿಣಾಮ, ಲಾರಿ ಮತ್ತು ಟಿ.ಟಿ.ಯಲ್ಲಿದ್ದ ಐವರಿಗೆ ಗಾಯಗಳಾಗಿರುವ ಘಟನೆ ಸಂಭವಿಸಿದೆ.

ಅಪಘಾತದ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳೀಯರು ಮತ್ತು ಸಾರ್ವಜನಿಕರು ನೆರವಿಗೆ ಧಾವಿಸಿದ್ದು, ಕೈಕಾಲು ಗಳು ಜಜ್ಜಿ ಹೋಗಿ ಗಂಭೀರ ಸ್ಥಿತಿಯಲ್ಲಿದ್ದ   ಗಾಯಾಳುಗಳನ್ನು ತಕ್ಷಣವೇ ಆಂಬುಲೆನ್ಸ್ ಮೂಲಕ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ಜೀರೋ ಟ್ರಾಫಿಕ್ ಮೂಲಕ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ಆಂಬುಲನ್ಸ್ ಚಾಲಕ ಮಾಲಕ ಸಂಘದವರು ತಲುಪಿ ಸೂಕ್ತ ಸ್ಪಂದನೆ ನೀಡಿದ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Leave a Reply

Discover more from

Subscribe now to keep reading and get access to the full archive.

Continue reading