ಆ ಸಾವುಗಳಿಗೆ ಐಫೋನ್ ಕಾರಣ ಅಲ್ಲ, ಮತ್ತೇನು?

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಒಂದೇ ಕುಟುಂಬದ ಮೂವರು ಕಮರಿಗೆ ಬಿದ್ದು ಸಾವನ್ನಪ್ಪಿದ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿದೆ. ಐಫೋನ್ ಖರೀದಿಯ ಇಎಂಐ ಕಂತು ಪಾವತಿಯ ವಿಷಯದಲ್ಲಿ ನಡೆದ ಜಗಳವೇ ಈ ದುರಂತಕ್ಕೆ ಮುಖ್ಯ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ, ಈ ಘಟನೆಯ ಹಿಂದೆ ಬೇರೆ ಕಾರಣಗಳೂ ಇರಬಹುದೇ ಎಂಬ ಅನುಮಾನಗಳು ಕೂಡ ಬಲವಾಗಿ ವ್ಯಕ್ತವಾಗುತ್ತಿವೆ.

ಮೃತಪಟ್ಟವರನ್ನು 19 ವರ್ಷದ ಕುನಾಲ್, ತಂದೆ ಮುರಳೀಧರ್ ಮತ್ತು ತಾಯಿ ಸಂಗೀತಾ ಎಂದು ಗುರುತಿಸಲಾಗಿದೆ. ಘಟನೆಗೂ ಮುನ್ನ ಸಂಗೀತಾ ಯೂಟ್ಯೂಬ್‌ನಲ್ಲಿ ಹಂಚಿಕೊಂಡ ವಿಡಿಯೋವೀಗ ಹೊಸ ಚರ್ಚೆಗೆ ಕಾರಣವಾಗಿದೆ.

ಸಂಗೀತಾ ಅವರು 30,000ಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದ ಯೂಟ್ಯೂಬರ್ ಆಗಿದ್ದರು. ಅವರು ಮುಖ್ಯವಾಗಿ ಮಿನಿ ವ್ಲಾಗ್‌ಗಳನ್ನು ಹಂಚಿಕೊಳ್ಳುತ್ತಿದ್ದರು. ಅನೇಕ ವಿಡಿಯೋಗಳಲ್ಲಿ ಮಗ ಕುನಾಲ್ ಕಾಣಿಸಿಕೊಂಡಿದ್ದರೂ, ಗಂಡ ಮುರಳೀಧರ್ ಯಾವುದೇ ವಿಡಿಯೋದಲ್ಲಿ ಕಾಣಿಸಿಕೊಂಡಿರಲಿಲ್ಲ. ಸಂಗೀತಾ ಕೂಡ ಐಫೋನ್ ಬಳಸುತ್ತಿದ್ದರು ಎಂಬುದು ವಿಡಿಯೋಗಳಿಂದ ಸ್ಪಷ್ಟವಾಗಿದೆ.

ಘಟನೆ ನಡೆಯುವ ಒಂದು ದಿನ ಮುನ್ನ ಪೋಸ್ಟ್ ಮಾಡಲಾಗಿದ್ದ ಒಂದು ನಿಮಿಷದ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಈ ವಿಡಿಯೋದಲ್ಲಿ “ಪ್ರೀತಿಯನ್ನು ಗೌರವಿಸದ ವ್ಯಕ್ತಿಯಿಗಾಗಿ ಏನು ಮಾಡಿದರೂ ಪ್ರಯೋಜನವಿಲ್ಲ” ಎಂಬಂತಹ ಮಾತುಗಳು ಮತ್ತು ಸಂಬಂಧಗಳ ಮೌಲ್ಯದ ಬಗ್ಗೆ ಉಲ್ಲೇಖಗಳಿವೆ. ಈ ಮಾತುಗಳು ಕುಟುಂಬದೊಳಗಿನ ಆಂತರಿಕ ಸಮಸ್ಯೆಗಳ ಕಡೆಗೆ ಬೆರಳು ತೋರಿಸುತ್ತಿವೆಯೇ ಎಂಬ ಅನುಮಾನವೂ ಉದ್ಭವಿಸಿದೆ.

ಸಂಗೀತಾ ಮತ್ತು ಆಕೆಯ ಪತಿಯ ನಡುವೆ ಸಂಬಂಧ ಹಳಸಿತ್ತು ಎಂಬ ವರದಿಗಳೂ ಇವೆ. ಆರು ವರ್ಷಗಳ ಹಿಂದೆ ಸಂಗೀತಾ ಅವರ ಹಿರಿಯ ಮಗ ಅಸುನೀಗಿದ್ದನು. ಅದರ ನಂತರ ಪತಿಯೊಂದಿಗೆ ಸಂಗೀತಾಳ ಸಂಬಂಧದಲ್ಲಿ ಬಿರುಕು ಮೂಡಿತ್ತು ಎಂದು ತಿಳಿದುಬಂದಿದೆ.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಐಫೋನ್ ಇಎಂಐ ಕುರಿತ ಜಗಳ ಮಾತ್ರವೇ ಈ ಕುಟುಂಬದ ಸಾಮೂಹಿಕ ಸಾವಿಗೆ ಕಾರಣವೇ, ಅಥವಾ ವರ್ಷಗಳಿಂದ ಕುಟುಂಬವನ್ನು ಕಾಡುತ್ತಿದ್ದ ಬೇರೆ ಯಾವುದೇ ಸಮಸ್ಯೆಗಳಿವೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದೇ ಕುಟುಂಬದ ಮೂವರ ಜೀವ ಒಂದೇ ದುರಂತದಲ್ಲಿ ಅಂತ್ಯಗೊಂಡಿರುವುದರ ನಿಜವಾದ ಕಾರಣವನ್ನು ಪತ್ತೆಹಚ್ಚಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading