ಸಯ್ಯದುಲ್ ಉಲಮಾ ಜಿಫ್ರಿ ತಂಙಳ್ ಖಾಝಿ ಬೈಹತ್: ಅರಂತೋಡಿನಲ್ಲಿ ವೈಭವದ ಸಮಾರಂಭ

ಅರಂತೋಡು: ಇಲ್ಲಿನ ತೆಕ್ಕಿಲ್ ಸಮುದಾಯ ಭವನದಲ್ಲಿ ಸಮಸ್ತ ಸಂಯುಕ್ತ ಜಮಾಅತ್ ಸುಳ್ಯ ತಾಲೂಕು ಘಟಕದ ವತಿಯಿಂದ ಸುಳ್ಯ ತಾಲೂಕಿನ ಸುಮಾರು 14 ಜಮಾಅತ್‌ಗಳಿಗೆ ಸಯ್ಯದುಲ್ ಉಲಮಾ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯಾ ತಂಙಳ್ ಅವರ ‘ಖಾಝಿ ಬೈಹತ್’ (ಖಾಝಿ ಸ್ವೀಕಾರ) ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ನೆರವೇರಿತು.

ಸಮಾರಂಭದ ವೇದಿಕೆಯಲ್ಲಿ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ, ಪುತ್ತೂರು ತಂಙಳ್, ಆದೂರು ತಂಙಳ್ ಹಾಗೂ ಬಂಬ್ರಾಣ ಉಸ್ತಾದ್ ಸೇರಿದಂತೆ ಪ್ರಮುಖ ಸಾದಾತ್‌ಗಳು ಮತ್ತು ಉಲಮಾಗಳು ಕರ್ನಾಟಕ‌ ಕಾರ್ಮಿಕ ಕನಿಷ್ಠ ವೇತನ‌ ಮಂಡಳಿ ಅಧ್ಯಕ್ಷ ಟಿ ಎಂ ಶಹೀದ್, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ‌ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಮೂಸಾ ಪೈಂಬಚ್ಚಾಲ್,ಕತ್ತರ್ ಇಬ್ರಾಹಿಮ್ ಹಾಜಿ, ಹಮೀದ್ ಹಾಜಿ ಸುಳ್ಯ ಸೇರಿದಂತೆ ಉಮರಾ ನೇತಾರರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶೋಭೆ ತಂದರು.

ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸುಳ್ಯ ತಾಲೂಕಿನ ವಿವಿಧ ಜಮಾಅತ್‌ಗಳಿಂದ ಆಗಮಿಸಿದ್ದ ಸಾವಿರಾರು ಸಾರ್ವಜನಿಕರು ಹಾಗೂ ದೀನಿ ಅನುರಾಗಿಗಳು ತೆಕ್ಕಿಲ್ ಸಮುದಾಯ ಭವನದಲ್ಲಿ ನೆರೆದಿದ್ದರು.

Leave a Reply

Discover more from

Subscribe now to keep reading and get access to the full archive.

Continue reading