ಊರವರ ಮಾದರಿ ಸೇವೆ: ಹಾಳಾಗಿದ್ದ ಪೆಲ್ತಡ್ಕ-ಕೊಪ್ಪತಕಜೆ ರಸ್ತೆಗೆ  ಕಲ್ಲು ಹಾಕಿ ದುರಸ್ತಿ ಮಾಡಿದ ಯುವಕರು

 

ಸುಳ್ಯ: ದೀರ್ಘ ಕಾಲದಿಂದ ತೀರಾ ಹದಗೆಟ್ಟು ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದ್ದ ಸುಳ್ಯ ತಾಲೂಕಿನ ಪೆಲ್ತಡ್ಕ – ಕೊಪ್ಪತಕಜೆ ರಸ್ತೆಯನ್ನು ಸ್ಥಳೀಯ ಯುವಕರು ಸ್ವಂತ ಮುತುವರ್ಜಿಯಿಂದ ದುರಸ್ತಿಗೊಳಿಸಿ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅದೇ ಊರಿನ ನಿವಾಸಿಗಳಾದ ವಸಂತ ಪೆಲ್ತಡ್ಕ, ಜಾನ್ಸನ್, ಹರ್ಷಿತ್ ಕೊಪ್ಪತಕಜೆ ಹಾಗೂ ರೀತನ್ ಅವರು ಒಗ್ಗೂಡಿ ಈ ಶ್ರಮದಾನ ಹಾಗೂ ಸೇವಾ ಕಾರ್ಯವನ್ನು ಕೈಗೊಂಡಿದ್ದಾರೆ.

ಈ ರಸ್ತೆಯು ಗುಂಡಿ ಬಿದ್ದು ವಾಹನ ಸಂಚಾರಕ್ಕೆ ಮತ್ತು ಸಾರ್ವಜನಿಕರ ಕಾಲ್ನಡಿಗೆಗೆ ತೀವ್ರ ತೊಂದರೆಯುಂಟುಮಾಡುತ್ತಿತ್ತು. ದಿನನಿತ್ಯ ಜನರು ಪಡುತ್ತಿದ್ದ ಹೈರಾಣನ್ನು ಗಮನಿಸಿದ ಈ ಯುವಕರು, ತಾವೇ ಮುಂದೆ ನಿಂತು  5 ಲೋಡು ಕೆಂಪುಕಲ್ಲನ್ನು ತರಿಸಿದ್ದಾರೆ. ಬಳಿಕ ರಸ್ತೆಯ ಗುಂಡಿಗಳನ್ನು ಮುಚ್ಚಿ, ಕಲ್ಲುಗಳನ್ನು ಸಮತಟ್ಟು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳ ಭರವಸೆಗೆ ಕಾಯದೆ, ತಮ್ಮ ಊರಿನ ರಸ್ತೆಯನ್ನು ತಾವೇ ಸರಿಪಡಿಸಿಕೊಂಡ ಈ ಯುವಕರ ಸಾಮಾಜಿಕ ಕಳಕಳಿ ಹಾಗೂ ಶ್ರಮದಾನದ ಸೇವೆಯನ್ನು ಗ್ರಾಮಸ್ಥರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading