ಬಸ್ ಒಳಗೂ ಕೊಡೆ ಹಿಡಿದು ಕೂರಬೇಕಾದ ಸ್ಥಿತಿ: ಸೋರುತ್ತಿದೆ ಸುಳ್ಯ ಕೊಯನಾಡು ಬಸ್

ಸುಳ್ಯದಿಂದ ಕೊಯಿನಾಡಿಗೆ ಇಂದು ಮಧ್ಯಾಹ್ನ 1.15ಕ್ಕೆ ಹೊರಟ ಕೆ.ಎಸ್.ಆರ್.ಟಿ.ಸಿ ಬಸ್ ಸಂಪೂರ್ಣವಾಗಿ ಸೋರುತ್ತಿದ್ದು, ಪ್ರಯಾಣಿಕರು ಕೊಡೆ ಹಿಡಿದು ಪ್ರಯಾಣಿಸಬೇಕಾದ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ.
KA 57 F 0469 ನಂಬರ್ ನ ಈ ಬಸ್ ಹಲವು ಕಡೆ ಸೋರುತ್ತಿದ್ದು, ಬಸ್ಸಿನೊಳಗೆ ಮಳೆನೀರು ನುಗ್ಗುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯದ ಬಗ್ಗೆ ಕಾಳಜಿ ವಹಿಸಬೇಕಾದ ಸಾರಿಗೆ ಇಲಾಖೆ ಈ ಕುರಿತು ಗಮನ ಹರಿಸಿ, ಕೂಡಲೇ ಈ ಬಸ್ಸನ್ನು ಬದಲಾಯಿಸಿ ಹೊಸ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಬಲವಾಗಿ ಒತ್ತಾಯಿಸಿದ್ದಾರೆ.

ವಿಡಿಯೋ ಲಿಂಕ್ ಕೆಳಗಿದೆ

Leave a Reply

Discover more from

Subscribe now to keep reading and get access to the full archive.

Continue reading