ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರನ ಪತ್ನಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ: ಒಂಬತ್ತು ತಿಂಗಳ ಹಸುಳೆ ಅನಾಥ

ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರನ ಪತ್ನಿ ಮನೆಯಲ್ಲಿ ಮೃತಪಟ್ಟು ಪತ್ತೆಯಾಗಿದ್ದಾರೆ. ಕಬಡ್ಡಿ ಆಟಗಾರ ಹರಿಯಾಣ ಮೂಲದ ಶೀಲು ಬಲ್ಹಾರ ಅವರ ಪತ್ನಿ ಮುಸ್ಕಾನ್ ಬಲ್ಹಾರ (23) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹರಿಯಾಣದ ಬಾಹು ಅಕ್ಬರ್‌ಪುರ ಗ್ರಾಮದ ಮನೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.
ಇದೇ ವೇಳೆ, ಮುಸ್ಕಾನ್ ಸಾವಿನ ಹಿಂದೆ ಪತಿಯ ಕಿರುಕುಳವಿದೆ ಎಂದು ಆರೋಪಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು ಕಬಡ್ಡಿ ಆಟಗಾರನ ಮನೆಯ ಮುಂದೆ ಪ್ರತಿಭಟನೆ ನಡೆಸಿದರು. ಈ ಘಟನೆಗೆ ಸಂಬಂಧಿಸಿದಂತೆ ಶೀಲು ಬಲ್ಹಾರ ಮತ್ತು ಅವರ ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫೊರೆನ್ಸಿಕ್ ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರೋಹ್ಟಕ್ ಆಸ್ಪತ್ರೆಗೆ ರವಾನಿಸಲಾಗಿದೆ.
ಫರ್ಮಾನ ಮೂಲದ ಮುಸ್ಕಾನ್ ಹಾಗೂ ಕಬಡ್ಡಿ ಆಟಗಾರ ಶೀಲು ಬಲ್ಹಾರ 2023ರ ಡಿಸೆಂಬರ್‌ನಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಒಂಬತ್ತು ತಿಂಗಳ ಗಂಡು ಮಗುವಿದೆ. ಹರಿಯಾಣದ ಪ್ರಸಿದ್ಧ ಕಬಡ್ಡಿ ಆಟಗಾರರಾಗಿರುವ ಶೀಲು ಬಲ್ಹಾರ, ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading