ಅರಂತೋಡು ಗ್ರಾಮದ ಕಾಂಗ್ರೆಸ್ ಸಭೆಯು ಜರುಗಿ,ನೂತನ ಗ್ರಾಮ ಕಾಂಗ್ರೆಸ್ ಸಮಿತಿಯನ್ನು ರಚಿಸಲಾಗಿದೆ.
ಈ ಸಮಿತಿಯ ಅಧ್ಯಕ್ಷರಾಗಿ ಬಾಲಕೃಷ್ಣ ರೈ ಅರಂತೋಡು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ತೇಜಕುಮಾರ್ ಬನ, ಅಬೂಬಕರ್ ಪಾರೆಕಲ್ಲು, ಮಾಧವ ಕುಕ್ಕುಂಬಳ ಹಾಗೂ ಶೇಷಶಯನ ದೇರಾಜೆ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಅಮೀರ್ ಕುಕ್ಕುಂಬಳ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಕಾರ್ಯದರ್ಶಿಗಳಾಗಿ ತಾಜುದ್ದೀನ್, ಜಯಪ್ರಕಾಶ್ ಮೇರ್ಕಜೆ, ಬಾಬು ಮಾಡದ ಕಾನ ಮತ್ತು ಜುಬೇರ್ ಅರಂತೋಡು ಆಯ್ಕೆಯಾಗಿದ್ದಾರೆ. ಹಾಗೆಯೇ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಶಿಕ್ ಕುಕ್ಕುಂಬಳ, ಪುಟ್ಟ ಮಾಡದ ಕಾನ ಹಾಗೂ ಹಮೀದ್ ಅರಂತೋಡು ನೇಮಕಗೊಂಡಿದ್ದಾರೆ.









