ಸುಳ್ಯದಲ್ಲಿ ದಿನೋಪಯೋಗಿ ಯಂತ್ರೋಪಕರಣಗಳ ಮಾರಾಟ ಮತ್ತು ರಿಪೇರಿ ಮಳಿಗೆ ‘ಸಂಜರಿ ಪವರ್ ಟೂಲ್ಸ್’ ಶುಭಾರಂಭ


ಸುಳ್ಯದ ಬಸ್ ನಿಲ್ದಾಣದ ಸಮೀಪದ ಸುಳ್ಯ ಸೆಂಟರ್‌ನಲ್ಲಿ ಸಂಜರಿ ಪವರ್ ಟೂಲ್ಸ್ ಮಳಿಗೆಯು ಶುಭಾರಂಭಗೊಂಡಿದೆ. ಸೂಡಾ ಅಧ್ಯಕ್ಷ ಮುಸ್ತಫಾ ಕೆ ಎಂ ಅವರು ಟೇಪ್ ಕತ್ತರಿಸುವ ಮೂಲಕ ಸೇಲ್ಸ್ ಘಟಕವನ್ನು ಉದ್ಘಾಟಿಸಿದರು. ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಇದರ ಅಧ್ಯಕ್ಷರಾದ ಸುಧಾಕರ ರೈ ಅವರು ಸರ್ವೀಸ್ ಘಟಕವನ್ನು ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಸುಳ್ಯದ ಪ್ರಮುಖರಾದ ವರ್ತಕರ ಸಂಘದ ಅಧ್ಯಕ್ಷರಾದ ಅಬ್ದುಲ್ ಹಮೀದ್ ಜನತಾ, ಗಾಂಧಿನಗರ ಜುಮಾಮಸೀದಿ ಅಧ್ಯಕ್ಷ ಮುಹಮ್ಮದ್ ಕೆಎಂಎಸ್, ಅಬ್ದುಲ್ ಲತೀಫ್ ಹರ್ಲಡ್ಕ, ಫವಾಝ್ ಕನಕಮಜಲು, ಇಬ್ರಾಹಿಮ್ ಶಿಲ್ಪಾ, ಪ್ಲಾಸ್ಟೋ ಮಹಮದ್, ರೋಟರಿ ಕ್ಲಬ್ ಸುಳ್ಯ ಸಿಟಿ ಅಧ್ಯಕ್ಷ ರಾಘೇಶ್ ರಾಘವ್, ಬಶೀರ್ ಕ್ವಾಲಿಟಿ, ಶರೀಫ್ ಸುದ್ದಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಮಳಿಗೆಯಲ್ಲಿ ನಿತ್ಯೋಪಯೋಗಿ ಉಪಕರಣಗಳು ಹಾಗೂ ವೆಲ್ಡಿಂಗ್, ಕಾರ್ಪೆಂಟರ್, ವಾಶ್ ಸೇರಿದಂತೆ ವಿವಿಧ ಬಳಕೆಯ ಯಂತ್ರೋಪಕರಣಗಳ ಮಾರಾಟ ಮತ್ತು ಸರ್ವೀಸ್ ಸೌಲಭ್ಯ ಲಭ್ಯವಿರುತ್ತದೆ. ಈಗಾಗಲೇ ಪುತ್ತೂರು ಮತ್ತು ದೇರಳಕಟ್ಟೆ ಸೇರಿದಂತೆ ಹಲವೆಡೆ ಇವರ ಶಾಖೆಗಳಿದ್ದು, ಈ ಉದ್ಯಮದಲ್ಲಿ ಅನುಭವ ಹಾಗೂ ಪರಿಣಿತಿ ಪಡೆದವರೇ ಇದರ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವುದಾಗಿ ಮಾಲಕರು ಭರವಸೆ ನೀಡಿದ್ದು, ವೆಲ್ಡಿಂಗ್ ಹಾಗೂ ಕಾರ್ಪೆಂಟರ್ ಸೇರಿದಂತೆ ಇತರೆ ಕೆಲಸಗಾರರಿಗಾಗಿ ವಿಶೇಷ ಕೊಡುಗೆಗಳನ್ನು (ಆಫರ್) ಘೋಷಿಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading