ಜಿಸಿಸಿ ಗಲ್ಫ್ ಕಮಿಟಿ ಎಲಿಮಲೆ ವಾರ್ಷಿಕ ಮಹಾಸಭೆ:ನೂತನ ಕಮಿಟಿ ರಚನೆ

 

ಯುಎಈ: ಜಿಸಿಸಿ ಗಲ್ಫ್ ಕಮಿಟಿ ಇದರ ವಾರ್ಷಿಕ ಮಹಾಸಭೆಯು ಜುಲೈ 28 ರಂದು ಯುಎಈ ಸಮಯ 8:30 ಕ್ಕೆ ಝೂಮ್ ನಲ್ಲಿ ನಡೆಯಿತು.ಅಧ್ಯಕ್ಷರಾದ ಸಿದ್ದೀಕ್ ಅಮ್ಜದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಬಶೀರ್ ಎಲಿಮಲೆಯವರು ಉದ್ಘಾಟನೆ ನೆರವೇರಿಸಿದರು.

ಸಿದ್ದೀಕ್ ಅಮ್ಜದಿ(ಸಿದ್ದೀಕ್ ಎಲಿಮಲೆ) ದುಆ ಕ್ಕೆ ನೇತೃತ್ವ ನೀಡಿದರು.ಪ್ರಧಾನ ಕಾರ್ಯದರ್ಶಿ ನೌಶಾದ್ ದೊಡ್ಡಂಗಡಿಯವರು ವರದಿ ವಾಚಿಸಿದರು. ಲೆಕ್ಕಪತ್ರವನ್ನು ಇರ್ಷಾದ್ ಎಲಿಮಲೆಯವರು ಮಂಡಿಸಿದರು.

ಸಭೆಯಲ್ಲಿ ಸಲಹಾಸಮಿತಿಯ ಸದಸ್ಯರಾದ ಹಸೈನಾರ್ ಗೂಡಂಗಡಿಯವರು ಹಾಗೂ ಅಧ್ಯಕ್ಷರಾದ ಸಿದ್ದೀಕ್ ಅಮ್ಜದಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ನಂತರ ನಡೆದ ಸಭೆಯಲ್ಲಿ ನೂತನ ಕಮಿಟಿಯನ್ನು ಆರಿಸಲಾಯಿತು.

ಅಧ್ಯಕ್ಷರಾಗಿ ಇರ್ಷಾದ್ ತಳೂರು, ಕಾರ್ಯದರ್ಶಿಯಾಗಿ ಆಸಿಫ್ ಪಳ್ಲಿಕ್ಕಲ್, ಕೋಶಾಧಿಕಾರಿಯಾಗಿ ಶಫೀಕ್ ಮೇಲೆಬೈಲು ಹಾಗೂ ಉಪಾಧ್ಯಕ್ಷರಾಗಿ ಸಿದ್ದೀಕ್ ಅಮ್ಜದಿ, ಜೊತೆ ಕಾರ್ಯದರ್ಶಿಯಾಗಿ ಸಿನಾನ್ ದೊಡ್ಡಂಗಡಿ, ಮೀಡಿಯಾ ಕಾರ್ಯದರ್ಶಿಯಾಗಿ ಶಫೀಕ್ ಮೇಲೆಬೈಲು, ಊರ ಪ್ರತಿನಿಧಿಗಳಾಗಿ ಹಾರಿಸ್ ಪಳ್ಳಿಕ್ಕಲ್, ನೌಶಾದ್ ವೈಎಚ್ ರವನ್ನು ಆರಿಸಲಾಯಿತು. ಸದಸ್ಯರುಗಳಾಗಿ ಶರೀಫ್ ಮೇಲೆಬೈಲು, ಜಲೀಲ್ ಗೂಡಂಗಡಿ,ಇಸ್ಮಾಯಿಲ್ ಜೀರ್ಮುಕ್ಕಿ, ಮುಸ್ತಫ ಮೆತ್ತಡ್ಕ, ನವಾಝ್ ಮೆತ್ತಡ್ಕ ರನನ್ನು ಆರಿಸಲಾಯಿತು. ಕಾರ್ಯದರ್ಶಿ ನೌಶಾದ್ ವೈಎಚ್ ರವರು ಸ್ವಾಗತಿಸಿ ನೂತನ ಕಾರ್ಯದರ್ಶಿ ಆಸಿಫ್ ಪಳ್ಳಿಕ್ಕಲ್ ರವರು ವಂದಿಸಿದರು.

Leave a Reply

Discover more from

Subscribe now to keep reading and get access to the full archive.

Continue reading