ಗೃಹಲಕ್ಷ್ಮಿ ಯೋಜನೆ ಆರಂಭಗೊಂಡು 3 ವರ್ಷ ತುಂಬಿದ ನೆನಪಿಗೆ ಸಂಪಾಜೆಯಲ್ಲಿ ಸಸಿ ನೆಡುವ ಕಾರ್ಯಕ್ರಮ

ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಹಲಕ್ಷ್ಮಿ ಆರಂಭಗೊಂಡು 3 ವರ್ಷ ತುಂಬಿದ ಸವಿ ನೆನಪಿಗಾಗಿ ನೆನಪಿನ ಸಸಿ ನೆಡುವ ಕಾರ್ಯಕ್ರಮ ಸಂಪಾಜೆಯಲ್ಲಿ ನಡೆಯಿತು .
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶಶಿದರ ಮಾಸ್ಟರ್ ರಾಜ್ಯಸರಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಮಾತನಾಡಿದರು .ವೇದಿಕೆಯಲ್ಲಿ ಉಪಸ್ತಿತರಿದ್ದ ಕರ್ನಾಟಕ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ನಿರ್ದೇಶಕ ಜಾನಿ.ಕೆ.ಪಿ ಮಾಜೀ ಗ್ರಾಮಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ ,ಅಧ್ಯಕ್ಷತೆಯನ್ನು ವಹಿಸಿದ ಸುಳ್ಯ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹಮೀದ್ ಕುತ್ತಮುಟ್ಟೆ ಪಿ.ಡಿ.ಒ. ಸರಿತಾ ವೋಲ್ಗಾ ಡಿಸೋಜ ಕರ್ನಾಟಕ ಸರಕಾರದ ಮಹತ್ವಾಂಕಾಂಕ್ಷಿ ಯೋಜನೆಯ ಬಗ್ಗೆ ಮಾತನಾಡಿದರು.ಗ್ಯಾರೆಂಟಿ ಅನುಷ್ಟಾನ ಸಮಿತಿ ಸದಸ್ಯರಾದ ಜ್ಞಾನಶೀಲನ್ ರಾಜು ,ಸ್ವಾಗತಿಸಿ ಲೂಕಾಸ್ ಟಿ.ಐ ವಂದಿಸಿದರು .ಈ ಸಂದರ್ಭದಲ್ಲಿ ಪೋಲೀಸ್ ಇಲಾಖಾ ಅಧಿಕಾರಿಗಳು ,ಮೆಸ್ಕಾಂ ಇಲಾಖಾ ಅಧಿಕಾರಿಗಳು ಮತ್ತು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಅಬುಸಾಲಿ ಗೂನಡ್ಕ, ಪ್ರಮಿಳಾ ಪೆಲ್ತಡ್ಕ , ಪ್ರಮುಖರಾದ ವಸಂತ ಗೌಡ ಪೆಲ್ತಡ್ಕ ,ಮಾಜೀ ಗ್ರಾ ಪಂ ಸದಸ್ಯರಾದ ಬೆಂಜಮಿನ್ ಡಿಸೋಜ, ಲಲನ ಕೆ.ಆರ್. ಶ್ರೀಧರ. ಕೆ.ಕೆ., ನಾಗಮುತ್ತು ನೆಲ್ಲಿಕುಮೇರಿ, ಸಾಜಿದ್ ಗೂನಡ್ಕ, ಹಾಗೂ ಗೃಹಲಕ್ಷ್ಮಿ ಫಲಾನುಭವಿಗಳು ಉಪಸ್ತಿತರಿದ್ದರು.

Leave a Reply

Discover more from

Subscribe now to keep reading and get access to the full archive.

Continue reading