ಕೆದಿಲ ಗ್ರಾಮದ ಕುದುಂಬ್ಲಾಡಿಯಲ್ಲಿ ಗುಡ್ಡ ಕುಸಿತ, ಅಪಾಯದ ಅಂಚಿನಲ್ಲಿ ಎರಡು ಮನೆಗಳು, ಜಿಲ್ಲಾಡಳಿತ ಗಮನಹರಿಸಲಿ

ಮಾಣಿ : ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪಾಟ್ರಕೋಡಿ ಸಮೀಪದ ಕುದುಂಬ್ಲಾಡಿ ಎಂಬಲ್ಲಿ ಗುಡ್ಡ ಕುಸಿತ ಸಂಭವಿಸಿದ ಕಾರಣ ಹಸಿಮೀನು ವ್ಯಾಪಾರಿ ಸಿದ್ದೀಕ್ ಹಾಗೂ ಸಮೀರ್ ಗಡಿಯಾರ ಎಂಬ ಬಡ ಕುಟುಂಬದ ಎರಡು ಮನೆಗಳು ಮತ್ತು ವಿದ್ಯುತ್ ಕಂಬಗಳು ಇನ್ನೇನು ಕೆಲವೇ ಕ್ಷಣಗಳು ಮಾತ್ರ ಎಂಬ ಆತಂಕದ ಪರಿಸ್ಥಿತಿ ಎದುರಿಸುತ್ತಿದೆ,ಕೂಡಲೇ ಜಿಲ್ಲಾಡಳಿತ ಮತ್ತು ಕೆದಿಲ ಗ್ರಾಮ ಪಂಚಾಯತ್ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ವ್ಯವಸ್ಥೆ ಮಾಡಿಕೊಡದಿದ್ದರೆ,ಯಾವುದೇ ಸಂದರ್ಭ ಭಾರೀ ಅನಾಹುತ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇದೆ,ಈ ಬಗ್ಗೆ ನಿರ್ಲಕ್ಷ್ಯ ತೋರದೆ ಮತ್ತು ಅನಾಹುತ ಸಂಭವಿಸಿದ ಮೇಲೆ ಮೊಸಳೆ ಕಣ್ಣೀರು ಸುರಿಸುವ ಬದಲು ಕೂಡಲೇ ಸ್ಪಂದಿಸಿ ಆ ಮನೆಯವರಿಗೆ ಧೈರ್ಯ ತುಂಬಬೇಕಾದದ್ದು ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಎಂದು ಗ್ರಾಮಸ್ಥರು ಮನವಿಮಾಡುತ್ತಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading