ತನ್ನ ವ್ಲಾಗ್ ಮೂಲಕ ಜಗತ್ತಿನ ಕೌತುಕಗಳನ್ನು ವೀಕ್ಷಕರಿಗೆ ಉಣಬಡಿಸುತ್ತಿದ್ದ ಯಾತ್ರಾ ಟು ಡೇ ಎಂಬ ಚಾನೆಲ್ ನ ದಿಲ್ ಶಾದ್ ಹಲವು ದಿನಗಳ ನಂತರ ಪತ್ತೆಯಾಗಿದ್ದಾನೆ.
ಹಲವು ದಿನಗಳಿಂದ ಕಾಣೆಯಾಗಿದ್ದ ಕೇರಳದ ಪ್ರಸಿದ್ಧ ಯೂಟೂಬರ್ ಬಗ್ಗೆ ಹಲವು ಊಹಾಪೋಹಗಳು ಹರಡಿದ್ದು ಕೊನೆಗೂ ಪತ್ತೆಯಾದ ಕಾರಣ ಆತನ ಅಭಿಮಾನಿಗಳು ಕುಟುಂಬಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಮೇಘಾಲಯದ ಅರಣ್ಯ ಪ್ರದೇಶದಲ್ಲಿ ಅಪಘಾತ ಸಂಭವಿಸಿದ ಕಾರಣ ದಿಲ್ ಶಾದ್ ಸುಳಿವು ದೊರೆಯದೇ ಇದ್ದು ಗಂಭೀರ ಗಾಯಗೊಂಡಿದ್ದಾರೆ ಎನ್ನಲಾದ ವ್ಲಾಗರ್ ಇದೀಗ ಆಸ್ಪತ್ರೆಯಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಮಾಹಿತಿ ಲಭ್ಯ ಆಗಿದೆ
ನಮ್ಮ ಕನ್ನಡದ ಡಾ. ಬ್ರೋ ರೀತಿಯ ಸುತ್ತಾಟದ ವಿಡಿಯೋ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ದಿಲ್ಶಾದ್ ಶೀಘ್ರ ಗುಣಮುಖರಾಗಿ ಬರಲಿ ಎನ್ನುವುದು ನಮ್ಮ ಹಾರೈಕೆ..










