ಅಜ್ಜಾವರ ಗ್ರಾಮದ ಅಡ್ಪಂಗಾಯ ವಾರ್ಡ್ ಕಾಂಗ್ರೆಸ್ ಸಮಿತಿಯ ಮಹಾಸಭೆಯು ಜುಲೈ 26, 2026 ರಂದು ಸಂಜೆ 7:00 ಗಂಟೆಗೆ ಅಡ್ಪಂಗಾಯ ಎ.ಬಿ. ಕಾಂಪ್ಲೆಕ್ಸ್ ನಲ್ಲಿ ವಾರ್ಡ್ ಅಧ್ಯಕ್ಷರಾದ ರವೀಶ ಮಾವಿನಪಳ್ಳ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಪ್ರಸಾದ್ ರೈ ಮೇನಾಲ ರವರು ಸಭೆಯನ್ನು ನಡೆಸಿಕೊಟ್ಟರು. ಅಡ್ಪಂಗಾಯ ವಾರ್ಡ್ ಪ್ರಧಾನ ಕಾರ್ಯದರ್ಶಿಯಾದ ಅಬ್ಬಾಸ್ ಎ.ಬಿ. ಯವರು ಎಲ್ಲರನ್ನು ಸ್ವಾಗತಿಸಿ ವರದಿ ವಾಚಿಸಿದರು. ವರದಿ ಮಂಡನೆ ಆದ ನಂತರ ಹಳೆ ಸಮಿತಿಯನ್ನು ಬರ್ಕಾಸ್ತುಗೊಳಿಸಿ ಹೊಸ ಸಮಿತಿಯನ್ನು ರಚಿಸಲಾಯಿತು.
ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ರವೀಶ ಮಾವಿನಪಳ್ಳ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ಬಾಸ್ ಎ.ಬಿ., ಕೋಶಾಧಿಕಾರಿಯಾಗಿ ಶಾಫಿ ಮಡಿಕೇರಿ, ಉಪಾಧ್ಯಕ್ಷರಾಗಿ ಸಲೀಂ ಎಂ.ಎ. ಅಡ್ಕ, ಅಂದುಂಞ ಗೋರಡ್ಕ, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಕುಂಞ ಧರ್ಮತಣ್ಣಿ ಹಾಗೂ 22 ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ರಂಜಿತ್ ರೈ ಮೇನಾಲ, ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಯಾದ ರಾಹುಲ್ ಅಡ್ಪಂಗಾಯ, ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷರಾದ ಕರುಣಾಕರ ಅಡ್ಪಂಗಾಯ, ಅಜ್ಜಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಹಸೈನಾರ್ ಹಾಜಿ ಗೋರಡ್ಕ, ಎ.ಬಿ. ಕಾಂಪ್ಲೆಕ್ಸ್ ಮಾಲಕರಾದ ಎ.ಬಿ. ಅಶ್ರಫ್ ಸ-ಅದಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಜೊತೆ ಕಾರ್ಯದರ್ಶಿಯಾದ ಮೊಹಮ್ಮದ್ ಕುಂಞ ಧರ್ಮತಣ್ಣಿ ಯವರು ಕಾರ್ಯಕ್ರಮವನ್ನು ನಿರೂಪಿಸಿದರು.









