ಗೌಡರ ಯುವ ಸೇವಾ ಸಂಘ (ರಿ) ಸುಳ್ಯ , ತಾಲೂಕು ಗೌಡ ಮಹಿಳಾ ಘಟಕ ಸುಳ್ಯ ಇದರ ವತಿಯಿಂದ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಕಷ್ಟದಲ್ಲಿರುವ ವ್ಯಕ್ತಿಯ ನೋವನ್ನು ಪೂರ್ಣ ವಾಗಿ ಪರಿಹರಿಸಲು ಸಾಧ್ಯವಾಗದಿದ್ದರೂ ಅವರ ನೋವಿನ ಜತೆ ನಿಲ್ಲುವುದು ಮಾನವೀಯತೆ – ಲತಾಶ್ರೀ ಸುಪ್ರೀತ್ ಮೋಂಟಡ್ಕ

ಗೌಡರ ಯುವ ಸೇವಾ ಸಂಘ ತಾಲೂಕು ಗೌಡ ಮಹಿಳಾ ಘಟಕ ಸುಳ್ಯ ಇದರ ವತಿಯಿಂದ ಮಹಿಳಾ ಘಟಕ 2ನೇ ವರ್ಷ ಪೂರೈಸಿದ ಸಂಭ್ರಮದ ಪ್ರಯುಕ್ತ ಸುಳ್ಯ ತಾಲೂಕು ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಕಾರ್ಯಕ್ರಮವು ಸುಳ್ಯದ ತಾಲೂಕು ಆಸ್ಪತ್ರೆಯಲ್ಲಿ ನಡೆಯಿತು. ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ಶ್ರೀ ಮತಿ ವಿನುತಾ ಪಾತಿಕಲ್ಲು ಇವರ ಅಧ್ಯಕ್ಷತೆ ಯಲ್ಲಿ ನಡೆದಿದ್ದು, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ರಾದ P S ಗಂಗಾಧರ,
ಸುಳ್ಯ ತಾಲೂಕು ಆಸ್ಪತ್ರೆಯ ಆಡಳಿತಧಿಕಾರಿ ಡಾ. ನವೀನ್ ಎನ್. ಎಸ್, ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಶ್ರೀಮತಿ ಲತಾಶ್ರೀ ಸುಪ್ರೀತ್ ಮೋoಟಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮ ದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಜೇನು ಸೊಸೈಟಿ ಅಧ್ಯಕ್ಷರಾದ ಚಂದ್ರ ಕೊಲ್ಚಾರ್, ಮಹಿಳಾ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಪುಷ್ಪಾ ರಾಧಾಕೃಷ್ಣ ಮಾಣಿಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಮಹಿಳಾ ಘಟಕದ ಕಾರ್ಯದರ್ಶಿ
ಸವಿತಾ ಸಂದೇಶ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ತಾರಾ ಮಾದವ ಬೆಳ್ಳಾರೆ ವಂದಿಸಿದರು.
ಸಭಾ ಕಾರ್ಯಕ್ರಮ ದ ಬಳಿಕ ಆಸ್ಪತ್ರೆಯ ಎಲ್ಲಾ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗೌಡ ನಗರ ಸಮಿತಿಯ ಅಧ್ಯಕ್ಷರಾದ ರಾಕೇಶ್ ಕುಂಟಿಕಾನ, ಗೌಡರ ಯುವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ತೀರ್ಥರಾಮ ಅಡ್ಕಬಳೆ, ಗೌಡ ಯುವ ಸೇವಾ ಸಂಘದ ನಿರ್ದೇಶಕರುಗಳಾದ ಹರಿಶ್ಚಂದ್ರ ಪಾತಿಕಲ್ಲು, ಸುಪ್ರೀತ್ ಮೋoಟಡ್ಕ, ಜನಾರ್ದನ ಕೊಳಂಜಿರೋಡಿ, ಮಂಜುನಾಥ್ ಮಡ್ತಿಲ, ಹಾಗೂ ಮಹಿಳ ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Leave a Reply

Discover more from

Subscribe now to keep reading and get access to the full archive.

Continue reading