ಮರ್ಹೂಮತ್ ನಿಶಾನಾ ಅವರ ಸಾರೆಪುಣಿ ನಿವಾಸಕ್ಕೆ ಕಲ್ಲುಗುಂಡಿ ಜಮಾಅತ್ ಪದಾಧಿಕಾರಿಗಳು ಮತ್ತು ಉಸ್ತಾದರ ಭೇಟಿ — ಕುಟುಂಬಕ್ಕೆ ಸಾಂತ್ವನ

ಇತ್ತೀಚೆಗೆ ಅಸಹಜವಾಗಿ ನಿಧನರಾದ ಮರ್ಹೂಮತ್ ನಿಶಾನಾ ಅವರ ಕುಂಬ್ರ ಸಾರೆಪುಣಿ ನಿವಾಸಕ್ಕೆ ಇಂದು ಕಲ್ಲುಗುಂಡಿ ಜಮಾಅತ್ ವತಿಯಿಂದ ಭೇಟಿ ನೀಡಲಾಗಿದ್ದು, ದುಃಖಿತ ಕುಟುಂಬದ ಸದಸ್ಯರಿಗೆ ಸಾಂತ್ವನ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಮಸೀದಿಯ ಖತೀಬರು, ಜಮಾಅತ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು, ಮರ್ಹೂಮತ್ ನಿಶಾನಾ ಅವರ ಪರಲೋಕ ಜೀವನಕ್ಕಾಗಿ ವಿಶೇಷ ದುಆ ನೆರವೇರಿಸಿದರು. ಸರ್ವಶಕ್ತನಾದ ಅಲ್ಲಾಹನು ಅವರಿಗೆ ಮಗ್ಫಿರತ್ ಅನುಗ್ರಹಿಸಿ, ಜನ್ನತುಲ್ ಫಿರ್ದೌಸ್‌ನಲ್ಲಿ ಉನ್ನತ ಸ್ಥಾನವನ್ನು ಕರುಣಿಸಲಿ ಹಾಗೂ ಅಗಲಿದ ಅವರ ಕುಟುಂಬದವರಿಗೆ ಈ ಅಪಾರ ದುಃಖವನ್ನು ಭರಿಸುವ ಸಹನೆ, ಧೈರ್ಯ ಮತ್ತು ನೆಮ್ಮದಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.
ಈ ಕಷ್ಟದ ಹಾಗೂ ದುಃಖದ ಸಂದರ್ಭದಲ್ಲಿ ಜಮಾಅತ್ ಸಂಪೂರ್ಣವಾಗಿ ಮೃತರ ಕುಟುಂಬದೊಂದಿಗೆ ನಿಲ್ಲಲಿದ್ದು, ಅಲ್ಲಾಹನು ಈ ಕುಟುಂಬಕ್ಕೆ ದುಃಖವನ್ನು ತಡೆಯುವ ಧೈರ್ಯವನ್ನು ದಯಪಾಲಿಸಲಿ ಎಂದು ಜಮಾಅತ್ ಕಮಿಟಿ ಸಾಕಾರ ನ್ಯೂಸ್ ಗೆ ತಿಳಿಸಿದೆ.

ನಿಮ್ಮದೊಂದು ಉತ್ತರ