






“ನನ್ನ ತಂದೆ ಒಬ್ಬ ಪ್ರಾಧ್ಯಾಪಕರಾಗಿದ್ದರು. ಅವರು ಅನೇಕ ಯುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು. ನನ್ನ ಬಾಲ್ಯದಲ್ಲಿ ಅವರು ನನಗೆ ಕಲಿಸಿದ ಒಂದು ಪಾಠವೆಂದರೆ: ‘ಸೋಲುವುದು ತಪ್ಪಲ್ಲ, ಆದರೆ ವಂಚಿಸಬಾರದು. ಎಂದಿಗೂ ಕೆಡುಕುದಾರಿಗಳನ್ನು ಹುಡುಕಬೇಡಿ.’
ಸಮಾಜದ ಹಿರಿಯರಾಗಿ, ಉತ್ತಮ ಸಂಸ್ಕೃತಿಯನ್ನು ರೂಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಪರಿಶ್ರಮಕ್ಕಿಂತ ಫಲಿತಾಂಶಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಮಾಜವು, ಅರ್ಹತೆಗಿಂತ ಸುಲಭ ದಾರಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ.
ತಮ್ಮ ಕಠಿಣ ಶ್ರಮಕ್ಕೆ ತಕ್ಕ ಮನ್ನಣೆ ಸಿಗದಿರುವಾಗ ವಿದ್ಯಾರ್ಥಿಗಳು ನಿರಾಶೆಗೊಳ್ಳುವುದು ಸ್ವಾಭಾವಿಕ. ಅವರಿಗೆ ಇನ್ನುಂದೆಂದೂ ಇಂತಹ ಪರಿಸ್ಥಿತಿ ಎದುರಾಗುವುದಿಲ್ಲ ಎಂಬುದನ್ನು ಖಚಿತಗೊಳಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ.
ಇಂದಿನ ಯುವ ಭಾರತವು ಕನಸುಗಳು ಮತ್ತು ಉತ್ಸಾಹದಿಂದ ತುಂಬಿದೆ. ನಮ್ಮ ಯಶಸ್ಸಿನ ಚಾಲಕ ಶಕ್ತಿ ಅವರೇ. ನಮ್ಮ ಯುವ ಪೀಳಿಗೆಯು ತಮ್ಮ ಆತ್ಮವಿಶ್ವಾಸ ಮತ್ತು ಉತ್ಸಾಹವನ್ನು ಕಾಯ್ದುಕೊಳ್ಳಲು ಸಹಾಯ ಮಾಡುವಲ್ಲಿ ಪೋಷಕರು, ಶಿಕ್ಷಕರು, ಸ್ನೇಹಿತರು, ಸಂಬಂಧಿಕರು, ಶಾಲೆಗಳು ಮತ್ತು ಆಡಳಿತಗಾರರು ಸೇರಿದಂತೆ ಸಮಾಜದ ಪ್ರತಿಯೊಬ್ಬರಿಗೂ ದೊಡ್ಡ ಜವಾಬ್ದಾರಿ ಮತ್ತು ವಿಭಿನ್ನ ಪಾತ್ರವಿದೆ.
ಕಠಿಣ ಶ್ರಮಕ್ಕೆ ಗೌರವ ಸಿಗುವ, ಪ್ರಾಮಾಣಿಕತೆಯನ್ನು ಪ್ರೋತ್ಸಾಹಿಸುವ ಮತ್ತು ಅರ್ಹತೆಗೆ ಜಯ ಸಿಗುವಂತಹ ಸಂಸ್ಕೃತಿಯನ್ನು ನಾವು ನಿರ್ಮಿಸಬೇಕಾಗಿದೆ.
ನಮ್ಮ ಮಕ್ಕಳ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಮತ್ತು ಅವರ ಕನಸುಗಳನ್ನು ರಕ್ಷಿಸಲು ನಾವು ಸರಿಯಾದ ದಾರಿಯನ್ನು ಕಂಡುಕೊಳ್ಳುತ್ತೇವೆ ಎಂಬ ಭರವಸೆ ನನಗಿದೆ.”

