





ನಿನ್ನೆಯವರೆಗೆ ನೀವು ಮೋಹನ್‌ಲಾಲ್ ಅವರ ಮಗಳಾಗಿದ್ದೀರಿ. ಅದಕ್ಕಿಂತ ಮಿಗಿಲಾದ ಯಾವುದೇ ಗುರುತು ನಿಮಗೆ ಇರಲಿಲ್ಲ.
ಮೋಹನ್‌ಲಾಲ್ ಎಂಬ ಮಹಾವೃಕ್ಷದ ನೆರಳಿನಲ್ಲಿ ಜೀವಿಸುತ್ತಾ, ಅದರಾಚೆಗೆ ನಿಮಗೊಂದು ಅಸ್ತಿತ್ವವಿದೆಯೇ ಎಂದೂ ಸಹ ತಿಳಿಯದ ಒಂದು ವಿಸ್ಮಯವಾಗಿದ್ದಿರಿ.
ಆದರೆ, ಇಂದು ನೀವು ಆ ಎಲ್ಲ ಗುರುತುಗಳನ್ನು ಕಳಚಿಹಾಕಿದ್ದೀರಿ. ಅತ್ಯಂತ ನಿರ್ಣಾಯಕ ಕ್ಷಣದಲ್ಲಿ ಅಂದರೆ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನ ಆಗಿರುವ ಹೊತ್ತಲ್ಲಿ, ದೆಹಲಿಯಲ್ಲಿ ರಕ್ತದೋಕುಳಿ ಹರಿವ ಸಮಯದಲ್ಲಿ ನೀವು ವ್ಯಕ್ತಪಡಿಸಿದ ಕಳಕಳಿ/ಆತಂಕ, ನಿಮ್ಮನ್ನು ಮೋಹನ್‌ಲಾಲ್ ಎಂಬ ನಟನ ನೆರಳಿನಿಂದ ಮುಕ್ತಗೊಳಿಸಿದೆ.
ಇತರರು ಬೆಂಬಲ ಸೂಚಿಸಿದಾಗ ಅವರೊಂದಿಗೆ ಸೇರಿಕೊಳ್ಳುವುದನ್ನು ನೀವು ಮಾಡಲಿಲ್ಲ. ಎಲ್ಲರೂ ಹಿಂಜರಿಯುತ್ತಿದ್ದಾಗ, ಯಾವುದೇ ಸಂಶಯವಿಲ್ಲದೆ ನೀವು ನಿಮ್ಮ ಧ್ವನಿಯನ್ನು ಎತ್ತಿದ್ದೀರಿ. ಬಹುಶಃ, ಮೋಹನ್‌ಲಾಲ್ ಕೂಡ ಇಲ್ಲಿಯವರೆಗೆ ತಪ್ಪಿಸಿಕೊಳ್ಳುತ್ತಿದ್ದ ಸನ್ನಿವೇಶವನ್ನು, ನೀವು ಬೇರೆಯದೇ ಆದ ನಿಲುವಿನಿಂದ ಎದುರಿಸಿದ್ದೀರಿ.
ನಿಮ್ಮ ಅಭಿಪ್ರಾಯ ಮತ್ತು ಅನುಕಂಪದ ಹಿಂದೆ ನೀವು ಅನುಭವಿಸಿದ ಸ್ವಾತಂತ್ರ್ಯದ ಪ್ರಭಾವವಿದೆ. ಅದೇ ನಿಮ್ಮನ್ನು ಅಂತಹದೊಂದು ಅಭಿಪ್ರಾಯ ವ್ಯಕ್ತಪಡಿಸಲು ಸಮರ್ಥರನ್ನಾಗಿ ಮಾಡಿದ್ದು.
ಆದ್ದರಿಂದ, ನೀವು ಮೋಹನ್‌ಲಾಲ್ ಅವರ ಮೌಲ್ಯವನ್ನು ಕಡಿಮೆ ಮಾಡಲಿಲ್ಲ. ತಮ್ಮ ಅನುಭವ ಮತ್ತು ಅಭಿಪ್ರಾಯಗಳೊಂದಿಗೆ ನಿಮ್ಮನ್ನು ನೀವಾಗಿಯೇ ಇರಲು ಅನುಮತಿಸಿದ, ಮತ್ತು ನಿಮ್ಮ ಮೇಲೆ ಸರಪಳಿಯಾಗದಿರಲು ಯತ್ನಿಸಿದ ಮೋಹನ್‌ಲಾಲ್ ಅವರಿಗೆ ಇನ್ನೂ ಹೆಚ್ಚಿನ ಗೌರವ/ಮೌಲ್ಯವನ್ನು ತಂದುಕೊಟ್ಟಿದ್ದೀರಿ.

