ಎಸ್ ವೈ ಎಸ್ ಸುಳ್ಯ ಝೋನ್ ವತಿಯಿಂದ ಸಾಂತ್ವನ ಕೇಂದ್ರ ಲೋಕಾರ್ಪಣೆ

ಎಸ್ ವೈ ಎಸ್ ಸುಳ್ಯ ಝೋನ್ ವತಿಯಿಂದ ಸುಳ್ಯದ ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿ ಸಾಂತ್ವನ ಕೇಂದ್ರವೊಂದನ್ನು ದಿನಾಂಕ 19-07-2026 ರಂದು ಉಧ್ಘಾಟಿಸಿ ಬಡರೋಗಿಗಳಿಗೆ ಅನುಕೂಲವಾಗುವಂತೆ ವಿವಿಧ ಪರಿಕರಗಳನ್ನು ಸಂಗ್ರಹಿಸಿ ಗಣ್ಯಾತಿಥಿಗಳ ಸಮಕ್ಷಮದಲ್ಲಿ ಲೋಕಾರ್ಪಣೆ ಮಾಡಲಾಯಿತು. ರೋಗಿಗಳಿಗೆ ಮತ್ತು ಅಶರಣರಿಗೆ ಅತ್ಯಗತ್ಯವಾಗಿ ಬೇಕಾಗುವ ಹಲವಾರು ಸೇವೆಗಳನ್ನು ಎಸ್ ವೈ ಎಸ್ ಕಳೆದ ಹಲವಾರು ವರ್ಷಗಳಿಂದ ನೀಡುತ್ತಾ ಬಂದಿದ್ದರೂ ಅದೊಂದು ವ್ಯವಸ್ಥಾಪಿತವಾಗಿ ಒಂದು ಕೇಂದ್ರದ ಮೂಲಕ ಜನರಿಗೆ ಸುಲಭವಾಗಿ ತಲುಪುವಂತೆ ಸಜ್ಜೀಕರಿಸಬೇಕೆಂಬ ಕನಸು ಸಾಕಾರಗೊಂಡಿದೆ. ಪುತ್ತೂರಿನ ಪ್ರತಿಷ್ಠಿತ ಆಸ್ಪತ್ರೆಯಾದ ಮೆಡ್ ಲ್ಯಾಂಡ್ ಆಸ್ಪತ್ರೆಯ ಚಯರ್ಮೇನ್ ಅಶ್ರಫ್ ಕಮ್ಮಾಡಿ ರವರು ರಿಬ್ಬನ್ ಕಟ್ಟಿಂಗ್ ಮೂಲಕ ಸಾಂತ್ವನ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿದರು. ನಂತರ ಎಸ್ ವೈ ಎಸ್ ಸುಳ್ಯ ಝೋನ್ ಅಧ್ಯಕ್ಷರಾದ ಅಬ್ದುಲ್ಲತೀಫ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಕರ್ನಾಟಕ ರಾಜ್ಯ ಸಾಂತ್ವನ ಉಪಾಧ್ಯಕ್ಷರಾದ ಇಬ್ರಾಹಿಂ ಖಲೀಲ್ ಮಾಲಿಕಿ ಯವರು ಉಧ್ಘಾಟಿಸಿ ಸಾಂತ್ವನದ ಬಗ್ಗೆ ವಿವರಿಸಿದರು. ಎಸ್ ವೈ ಎಸ್ ಮಾಜಿ ರಾಜ್ಯಾಧ್ಯಕ್ಷರೂ ಪ್ರಸ್ತುತ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಗಳೂ ಆಗಿರುವ ಡಾ|ಅಬ್ದುರ್ರಶೀದ್ ಝೈನಿ ಕಾಮಿಲ್ ರವರು ಸಾಂತ್ವನ ಕೇಂದ್ರದ ಬಗ್ಗೆ ಮತ್ತು ಸೇವೆಗಳ ಬಗ್ಗೆ ಮನದಟ್ಟಾಗುವಂತೆ ಆಕರ್ಷಣೀಯ ಶೈಲಿಯಲ್ಲಿ ವಿಷಯ ಮಂಡಿಸಿದರು. ನಂತರ ಅಗ್ನಿಶಾಮಕ ದಳದ ಅಧಿಕಾರಿಗಳಾದ ಕಿರಣ್ ಸರ್, ಸೂಡ ಅಧ್ಯಕ್ಷರಾದ ಮುಸ್ತಫ ಕೆ.ಎಂ.ಸುಳ್ಯ, ರೆಡ್ ಕ್ರಾಸ್ ಸಂಸ್ಥೆಯ ನಾಯಕರಾದ ಸುಧಾಕರ ರೈ, ಸುಳ್ಯ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ, ಅಕ್ಷಯ ಚಾರಿಟೇಬಲ್ ಟ್ರಸ್ಟ್ ಸಂಚಾಲಕರೂ ಎಸ್ ವೈ ಎಸ್ ರಾಜ್ಯ ಮೆಡಿಕಲ್ ಇನ್ಚಾರ್ಜ್ ಕೂಡ ಆಗಿರುವ ಇಬ್ರಾಹಿಂ ಕರೀಂ ಕದ್ಕಾರ್ ಸಹಿತವಿರುವ ಗಣ್ಯಾತಿಥಿಗಳು ಮಾತನಾಡಿ ಶುಭನುಡಿಗಳನ್ನು ನೀಡಿದರು. ಅಶ್ರಫ್ ಹಾಜಿ ಕಮ್ಮಾಡಿ ಯವರ ವತಿಯಿಂದ ಓಕ್ಸಿಜನ್ ಕಿಟ್ಟನ್ನು ಸಾಂತ್ವನ ಕೇಂದ್ರಕ್ಕೆ ಹಸ್ತಾಂತರಿಸಿದರು. ಸುಧಾಕರ್ ರೈ ಯವರು ಒಂದು ಓಕ್ಸಿಜನ್ ಕಿಟ್ ಮತ್ತು ಉತ್ತಮ ಗುಣಮಟ್ಟದ ಎರಡು ಟರ್ಪಲ್ ನೀಡುವುದಾಗಿ ಭರವಸೆ ನೀಡಿದರು. ಅದರಂತೆ ಈ ಸಾಂತ್ವನ ಕೇಂದ್ರದ ವಿವಿಧ ಸಲಕರಣೆಗಳನ್ನು ನೀಡಿದ ಫೈಝಲ್ ಕಟ್ಟೆಕಾರ್ ನೇತೃತ್ವದ ಕೆಎ 21 ವಾಟ್ಸಪ್ ಗ್ರೂಪ್, ಎಸ್ ಜೆ ಎಂ ಸುಳ್ಯ ರೇಂಜ್, ಎಸ್ ವೈ ಎಸ್ ಗಾಂಧಿನಗರ, ಎಲಿಮಲೆ, ಸುಣ್ಣಮೂಲೆ, ಗೂನಡ್ಕ, ಕಲ್ಲುಗುಂಡಿ ಸಹಿತವಿರುವ ಯೂನಿಟ್ ಗಳು, ವಸ್ತುಗಳಿಗಾಗಿ ಮತ್ತು ಇತರ ರೀತಿಯಲ್ಲಿ ವ್ಯಕ್ತಿಗತವಾಗಿ ಸಹಕರಿಸಿದ ಹಾಜಿ ಅಬ್ದುಲ್ಲತೀಫ್ ಹರ್ಲಡ್ಕ, ಇಬ್ರಾಹಿಂ ಹಾಜಿ ಕುಂಬಕ್ಕೋಡು, ಹನೀಫ್ ಮದನಿ ಮಂಡೆಕೋಲು ಬಿಎಂಎ ಫ್ರುಟ್ಸ್ ಎಂಡ್ ವೆಜಿಟೆಬಲ್ಸ್ ಗ್ರೂಪ್ ನಾವೂರು ಹಾಗೂ ಇನ್ನಿತರ ಎಲ್ಲಾ ದಾನಿಗಳನ್ನು ಈ ಸಂಧರ್ಭದಲ್ಲಿ ಸ್ಮರಿಸಲಾಯಿತು.

ಸಿದ್ದೀಖ್ ಗೂನಡ್ಕ ಸ್ವಾಗತಿಸಿ ವಂದಿಸಿದರು.

Leave a Reply

Discover more from

Subscribe now to keep reading and get access to the full archive.

Continue reading