ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ಜೇಸಿಐ ಭಾರತ ವಲಯ 15, ನೇತ್ರಾವತಿ (ರಿಜನ್ -ಬಿ) ಇದರ ಉಪಾಧ್ಯಕ್ಷರಾದ ಜೇಸಿ ಸೆನೆಟರ್ ಜಿತೇಶ್ ಪಿರೆರಾ ರವರ ಎರಡನೇ ಅಧೀಕೃತ ಭೇಟಿ ಕಾರ್ಯಕ್ರಮ ಜುಲೈ 18ರಂದು ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷರಾದ ನವೀನ್ ಕುಮಾರ್ ಅವರ ನಾರ್ಕೋಡು ನಿವಾಸದಲ್ಲಿ ನಡೆಯಿತು.
ಘಟಕದ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಜೇಸಿಐ ಸುಳ್ಯ ಪಯಸ್ವಿನಿ ಇದರ ಅಧ್ಯಕ್ಷೆ ಜೆಎಫ್ಎಂ ಲತಾಶ್ರೀ ಸುಪ್ರೀತ್ ಮೋoಟಡ್ಕ ವಹಿಸಿ ಸಭೆಯನ್ನು ನಡೆಸಿಕೊಟ್ಟರು.
ವಲಯ ಉಪಾಧ್ಯಕ್ಷರು ತಮ್ಮ ಭೇಟಿಯಲ್ಲಿ ಘಟಕದ ಕಾರ್ಯ ವೈಖರಿಗಳನ್ನು ಶ್ಲಾಘಿಸಿದರು. ಜೇಸಿಐ ಭಾರತದ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಸಭೆಯಲ್ಲಿ ಮಾಹಿತಿಯನ್ನು ನೀಡಿದರು. ಈ ಸಂಧರ್ಭದಲ್ಲಿ ಘಟಕದ ಟೀಶರ್ಟ್ ನ್ನು ವಲಯ ಉಪಾಧ್ಯಕ್ಷರು ಬಿಡುಗಡೆ ಗೊಳಿಸಿದರು.
ವೇದಿಕೆಯಲ್ಲಿ ಜೇಸಿಐ ಭಾರತದ ಪೂರ್ವ ವಲಯಾಧ್ಯಕ್ಷರೂ ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷರಾದ ಪಿಪಿಪಿ ಅಶೋಕ್ ಚೂಂತಾರು, ನಿಕಟಪೂರ್ವ ಅಧ್ಯಕ್ಷರಾದ ಸುರೇಶ್ ಕಾಮತ್, ಕಾರ್ಯದರ್ಶಿ ತಾರಾ ಮಾದವ ಚೂಂತಾರು ಹಾಗೂ ಮಾಧವ ಮುಡೂರು ಉಪಸ್ಥಿತರಿದ್ದರು.