ಅಬುಧಾಬಿ(ಯುಎಇ): ಎಸ್ಕೆಎಸ್ಎಸ್ಎಫ್ ಅಬುಧಾಬಿ ಕರ್ನಾಟಕ ಇದರ ಆಶ್ರಯದಲ್ಲಿ, 5ನೇ ಬಾರಿಗೆ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ: 17/05/2026 ಇತ್ತೀಚೆಗೆ ಅಬುಧಾಬಿ ಖಾಲಿದಿಯ್ಯದಲ್ಲಿರುವ ಸೇಹಾ ಬ್ಲಡ್ ಬ್ಯಾಂಕ್‌ನಲ್ಲಿ ಯಶಸ್ವಿಯಾಗಿ ಜರುಗಿತು.ರಕ್ತದಾನ ಶಿಬಿರದ ಮುಖ್ಯ ಸಂಯೋಜಕ ಮುನೀರ್ ಬೆಳ್ಳಾರೆಯವರ ಅನುಪಸ್ಥಿತಿಯಲ್ಲಿ ಸಹ ಸಂಯೋಜಕರಾದ ಬಶೀರ್ ಕೊಡ್ಲಿಪೇಟೆರವರ ನಾಯಕತ್ವದಲ್ಲಿ ಮುಂದುವರೆದ ಶಿಬಿರವು SKSSF ನೇತಾರರ ಉಪಸ್ಥಿತಿಯಲ್ಲಿ ಶಂಸುಲ್ ಉಲಮಾರ ನಾಮಧೇಯದಲ್ಲಿ ಫಾತಿಹಾ ಪಠಿಸಿ ಪ್ರಾರಂಭಿಸಿ, SKSSF ಅಬುಧಾಬಿ ಕರ್ನಾಟಕ ಸಮಿತಿ ಮುನ್ನೆಲೆ ನೇತಾರ ಶಾಫಿ ಹಾಜಿ ಪೆರುವಾಯಿರವರು ರಕ್ತದಾನ ನೀಡುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು. ಮುಂದುವರೆದು ಬರೋಬ್ಬರಿ 60 ರಷ್ಟು ರಕ್ತದಾನಿಗಳು ದಾಖಲಾತಿ ಮಾಡಿ 4 ಗಂಟೆಗಳ ಕಾಲ ಶಿಬಿರವು ವಿಜ್ರಂಭಣೆಯಿಂದ ಜರುಗಿತು.
ಸಮಾರೋಪ ಸಭಾ ಕಾರ್ಯಕ್ರಮವು SKSSF ಅಬುಧಾಬಿ ಕರ್ನಾಟಕ ಸಮಿತಿ ಅಧ್ಯಕ್ಷರಾದ ಅಬೂಬಕ್ಕರ್ ಮುಂಡೋಳೆರವರ ಅಧ್ಯಕ್ಷತೆಯಲ್ಲಿ ಸಾಂಘಿಕ ಶಕ್ತಿ, ಸಂಘಟನಾ ಪ್ರ.ಕಾರ್ಯದರ್ಶಿ ಹಾಫಿಝ್ ಝೈನ್ ಸಖಾಫಿ ಉಳ್ಳಾಲ ಸ್ವಾಗತ ಕೋರಿ ಪ್ರಾರಂಭಿಸಿದ ಸಭೆಯನ್ನು ಸಂಘಟನಾ ಕೋಶಾಧಿಕಾರಿ, ಶಿಬಿರ ಸಹ ಸಂಯೋಜಕರಾದ ಬಶೀರ್ ಕೊಡ್ಲಿಪೇಟೆ ಉದ್ಘಾಟಿಸಿ “ಶಿಬಿರದ ಪಾರ್ಮುಖ್ಯತೆಯನ್ನು ತಿಳಿಸಿ, SKSSF ಮುನ್ನಡೆಸುವ ಸಮಾಜಮುಖಿ ಕಾಯಕಗಳನ್ನು ಮುಕ್ತ ಕಂಠದಿಂದ ಪ್ರಶಂಸಿಸಿ ಸಹಕರಿಸಿದವ ಸರ್ವರನ್ನು ಶ್ಲಾಘಿಸಿದರು.” ಅಧ್ಯಕ್ಷೀಯ ಭಾಷಣದಲ್ಲಿ “ರಕ್ತದಾನದ ಮಹತ್ವವನ್ನು ವಿವರಿಸಿ ಮಾತನಾಡಿದ ಅವರು ಭಾರತೀಯರ ಯುಎಇಯಲ್ಲಿನ ಭಾಂದವ್ಯ, ಅನಿವಾಸಿ ಕನ್ನಡಿಗರ ಸಮಾಜಮುಖಿ ಕಾರ್ಯಗಳನ್ನು ಒತ್ತಿ ಹೇಳಿದರು. ಶಿಬಿರದ ಮುಖ್ಯ ಅತಿಥಿಯಾಗಿ ಆಗಮಿಸಿದ ಸಮಾಜ ಸೇವಕರೂ, ತನ್ನ ವಿಶೇಷ ಸಾಮರ್ಥಕ್ಕಾಗಿ ಇತ್ತೀಚೆಗೆ ಗಿನ್ನೆಸ್ ರೆಕಾರ್ಡ್ ಗಳಿಸಿದ ಅನಿವಾಸಿ ಕನ್ನಡಿಗ ಡಾ. ಅಬ್ದುಲ್ ಆರಿಸ್ ಪುತ್ತಿಲರವರು ಮಾತನಾಡಿ ರಕ್ತದಾನದ ಮಹತ್ವದ ಬಗ್ಗೆ ಮಾತನಾಡುತ್ತಾ “ಒಂದು ಜೀವವನ್ನು ಉಳಿಸುವ ಸಲುವಾಗಿ ಮಾಡುವ ಕಾರ್ಯವೂ ಇಂದೊಂದು ಮಹತ್ಕಾರ್ಯವಾಗಿದ್ದು SKSSF ಅಬುಧಾಬಿ ಕರ್ನಾಟಕ ನಡೆಸುತ್ತಿರುವ 5 ನೇ ಬೃಹತ್ ರಕ್ತದಾನ ಶಿಬಿರ ಶ್ಲಾಘಿಸಿ ಇಂತಹ ಲೋಕಾಭಿವೃದ್ಧಿ ಕಾರ್ಯಗಳು ಇನ್ಮುಂದೆಯೂ ನಡೆಯಲಿ, ನಿಮ್ಮ ಮುಂದಿನ ಕೈಂಕರ್ಯಗಳ ಜೊತೆ ನಾನೂ ಕೈಜೋಡಿಸುವೆನು ಎಂಬ ಭರವಸೆ ಮಾತುಗಳನ್ನಾಡಿ ಹುರಿದುಂಬಿಸಿದರು.
ಆ ಬಳಿಕ ಮಾತನಾಡಿದ SKSSF ಶಾರ್ಜಾ ಕರ್ನಾಟಕ ಸಮಿತಿ ಅಧ್ಯಕ್ಷ ಶಂಸುದ್ದೀನ್ ಹಾಜಿ ಸೂರಲ್ಪಾಡಿ “ಶಿಬಿರದ ಬಗ್ಗೆ ಪ್ರಶಂಸೆ ತಿಳಿಸಿ, ಒಗ್ಗಟ್ಟಾಗಿ ಯುಎಇ ಉದ್ದಗಲಕ್ಕೂ ನಮ್ಮ ಈ ಮಹತ್ಕಾರ್ಯ ಹರಡಬೇಕು.
ಆ ಮೂಲಕ ಒಳಿತನ್ನು ಸಾಧಿಸೋಣ ಎಂದು ಬೆನ್ನು ತಟ್ಟಿದರು.” ಆ ಬಳಿಕ ಶಾರ್ಜಾ ಸಮಿತಿ ಉಪಾಧ್ಯಕ್ಷರಾದ ರಫೀಕ್ ಸುರತ್ಕಲ್, ಯಹ್ಯಾ ಕೊಡ್ಲಿಪೇಟೆ, SKSSF ಅಬುಧಾಬಿ ಕಾಸರಗೋಡು ಸಮಿತಿ ಪ್ರ.ಕಾರ್ಯದರ್ಶಿ ಅಲ್ ಸಾಹಿಬ್ ಮಾಸ್ತಿಕುಂಡ್, SKSSF ದುಬೈ ಸಮಿತಿ ನೇತಾರರಾದ ಇಬ್ರಾಹಿಂ ಆತೂರು “ಶಿಬಿರದ ಶಿಸ್ತನ್ನು ಹೊಗಳಿ, ಇನ್ನಷ್ಟು ಲೋಕೋಪಯೋಗಿ ಕಾರ್ಯಗಳು ಎಲ್ಲರೂ ಒಟ್ಟು ಸೇರಿ ನಡೆಸೋಣ ಎಂದು ಧೈರ್ಯ ತುಂಬಿದರು. ಆ ಮಧ್ಯೆ SKSSF ಅಬುಧಾಬಿ ಕರ್ನಾಟಕ ಸಮಿತಿ ಉಪಾಧ್ಯಕ್ಷ ಜಾಫರ್ ಉಪ್ಪಿನಂಗಡಿ ಮಾತನಾಡಿ ನಮ್ಮ ಸಂಘಟನೆಯ ಅಧೀನದಲ್ಲಿ ಆಯೋಜಿಸಿರುವ ಬಹುಮುಖ್ಯ ಯೋಜನೆಯಾದ ಉಮ್ರಾ ಯಾತ್ರೆಯ ಬಗ್ಗೆ ನೆನಪಿಸಿ ಸಭೆ ಸೇರಿರುವವರ ಸಹಕಾರ-ಸಹಭಾಗಿತ್ವವನ್ನು ಕೇಳಿಕೊಂಡರು. ಮುನೀರ್ ಬಿ.ಎಚ್ ಬೆಳ್ಳಾರೆ ಮತ್ತು ಮುಜೀಬ್ ಉಚ್ಚಿಲ ತನ್ನ ಸ್ನೇಹಿತರನ್ನೆಲ್ಲ ಕರೆತಂದು ಶಿಬಿರಕ್ಕೆ ಬಲತುಂಬಿ ಸಹಕರಿಸಿದರು.
ಸಂಘಟನಾ ನೇತಾರರಾದ ಹಸನ್ ದಾರಿಮಿ ಕಬಕ, ಹಾರಿಸ್ ಮಖ್ದೂಮಿ ಕುಕ್ಕಾಜೆ, ಅಬೂಬಕ್ಕರ್ ಸಕಲೇಶಪುರ, ರಕ್ತದಾನ ಶಿಬಿರದ ಉಸ್ತುವಾರಿ ಹಂಝ ನಾಳ, ಅಬುಧಾಬಿ ಎಸ್ಕೆಎಸ್ಎಫ್ ಸಂಘಟನಾ ಕಾರ್ಯದರ್ಶಿ ತ್ವಾಹ ಉಪ್ಪಿನಂಗಡಿ, ಅನಸ್ ಕರಾಯ, ಹಿದಾಯತ್ತ್ ರಹ್ಮಾನ್ ಆತೂರು, ಶಾಫಿ ಕಿನ್ಯ, ಸಫ್ವಾನ್ ಕೊಡಾಜೆ, ಸಾದಿಕ್ ಬೆಳ್ಳಾರೆ, ಉಮರ್ ಪಾಂಡವರಕಲ್ಲು, ಹಫೀಲ್ ಆತೂರು ಭಾಗವಹಿಸಿ ಕಾರ್ಯಕ್ರಮವು ಯಶಸ್ವಿಯಾಗಲು ಸಹಕರಿಸಿದರು. ಕಾರ್ಯಕ್ರಮ ಕೊನೆಗೆ ಹಸನ್ ದಾರಿಮಿ ಕಬಕ ದುಆ ನಿರ್ವಹಿಸಿ, SKSSF ಅಬುಧಾಬಿ ಕರ್ನಾಟಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಫಿಝ್ ಝೈನ್ ಸಖಾಫಿ ಉಳ್ಳಾಲ ನಿರೂಪಿಸಿ, ಶಿಬಿರದ ಉಸ್ತುವಾರಿ ಹಂಝ ನಾಳ ಧನ್ಯವಾದ ಸಲ್ಲಿಸಿದರು.
ಧಾರ್ಮಿಕ ಕ್ಷೇತ್ರದೊಂದಿಗೆ ಸಾಮಾಜಿಕ, ಶೈಕ್ಷಣಿಕ ಸೇವೆಯಲ್ಲೂ ಮುಂಚೂಣಿಯಲ್ಲಿರುವ ಎಸ್ಕೆಎಸ್ಎಫ್ ಅಬುಧಾಬಿ ಕರ್ನಾಟಕವು ಸಮಾಜಮುಖಿ ಕಾರ್ಯಗಳಲ್ಲಿ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಸಂಘಟನಾ ಚತುರ ಸಾರಥಿ ಶಾಫಿ ಹಾಜಿ ಪೆರುವಾಯಿ ಅವರು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಒಟ್ಟು 56 ಮಂದಿ ದಾಖಲಾತಿ ಮಾಡಿದ್ದು, ಅವರಲ್ಲಿ ಅನಸ್ ಕರಾಯ ಸಿಂಗಲ್ ಡೋನರ್ ಪ್ಲೇಟ್‌ಲೆಟ್ ದಾನ ಮಾಡಿದ್ದಾರೆ. ರಕ್ತದಾನ ಪ್ರಕ್ರಿಯೆಯಲ್ಲಿ ಸೇವಾ ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಸಂಪೂರ್ಣ ಸಹಕಾರ ನೀಡಿದರು.








