ಜುಲೈ 26 ಕ್ಕೆ ಜಯನಗರ ಮಾಸಿಕ ಅಜ್ಮೀರ್ ಮೌಲಿದ್


ಜನ್ನತುಲ್ ಉಲೂಂ ಮದ್ರಸ ಮತ್ತು ಮಸ್ಜಿದ್ ಜಯನಗರ ಕಮಿಟಿ ಇದರ ವತಿಯಿಂದ ಮಾಸಿಕ ಅಜ್ಮೀರ್ ಮೌಲಿದ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಧಾರ್ಮಿಕ ಕಾರ್ಯಕ್ರಮವು ಜುಲೈ 26ರ ಆದಿತ್ಯವಾರದಂದು ಮಗ್ರಿಬ್ ನಮಾಝ್‌ನ ಬಳಿಕ ಜಯನಗರದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಉಮರ್ ಮುಸ್ಲಿಯಾರ್ ಮರ್ದಾಳ ಅವರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಬಹು ಅಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಜಯನಗರ ಅವರು ಕಾರ್ಯಕ್ರಮದ ನೇತೃತ್ವವನ್ನು ವಹಿಸಲಿದ್ದಾರೆ. ಜಯನಗರದ ಇಮಾಮ್ ಮತ್ತು ಸದರ್ ಮುಅಲ್ಲಿಂ ಆಗಿರುವ ಬಹು ಶಫೀಖ್ ಹಿಮಮಿ ಸಖಾಫಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸುವ ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಕಾರ್ಯಕ್ರಮದ ಮುಕ್ತಾಯದ ನಂತರ ಕೊನೆಯಲ್ಲಿ ಎಲ್ಲರಿಗೂ ತಬರುಕ್ ವಿತರಣೆ ಇರಲಿದೆ ಎಂದು ಜನ್ನತುಲ್ ಉಲೂಂ ಮದ್ರಸ ಮತ್ತು ಮಸ್ಜಿದ್ ಜಯನಗರ ಕಮಿಟಿ ತಿಳಿಸಿದೆ.

Leave a Reply

Discover more from

Subscribe now to keep reading and get access to the full archive.

Continue reading