









ಗುಜರಾತ್ನ ಅಮ್ರೇಲಿ ಜಿಲ್ಲೆಯ ಅಂತಾಲಿಯಾ ಗ್ರಾಮದ ಬಳಿ ಸಿಂಹವೊಂದು ೨೧ ವರ್ಷದ ಯುವಕನನ್ನು ಕಚ್ಚಿ ಕೊಂದಿರುವ ಭೀಕರ ಘಟನೆ ನಡೆದಿದೆ.
ಅನಧಿಕೃತವಾಗಿ ಮೀಸಲು ಅರಣ್ಯ ಪ್ರದೇಶಕ್ಕೆ ನುಗ್ಗಿದ್ದ ಯುವಕರ ಗುಂಪಿನಲ್ಲಿದ್ದ ಸೋಹಿಲ್ ಮೇಮನ್ ಕೊಲೆಯಾದ ದುರ್ದೈವಿ. ಮಾಹಿತಿ ಪ್ರಕಾರ, ಸಿಂಹಗಳು ಜೋಡಿಯಾಗುವ ಸಮಯದಲ್ಲಿ ಫೋಟೋ ಹಾಗೂ ವಿಡಿಯೋ ತೆಗೆಯಲು ಈತ ಸಿಂಹದ ತೀರಾ ಹತ್ತಿರ ಹೋಗಿದ್ದನೆನ್ನಲಾಗಿದೆ. ಇದರಿಂದ ಕೆರಳಿದ ಗಂಡು ಸಿಂಹ ಯುವಕನ ಮೇಲೆ ತೀವ್ರವಾಗಿ ದಾಳಿ ನಡೆಸಿ, ಆತನ ಸಾವಿಗೆ ಕಾರಣವಾಗಿದೆ.
ಅಮ್ರೇಲಿ ವಲಯದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಸಿಂಹದ ದಾಳಿಗೆ ಮನುಷ್ಯರು ಬಲಿಯಾಗುತ್ತಿರುವ ನಾಲ್ಕನೇ ಘಟನೆ ಇದಾಗಿದೆ.ಅರಣ್ಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ, ವನ್ಯಜೀವಿಗಳ ಖಾಸಗಿತನಕ್ಕೆ ಧಕ್ಕೆ ತರುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಅಧಿಕಾರಿಗಳು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

