ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ SIR ಪ್ರಗತಿ ಪರಿಶೀಲನೆ ಮತ್ತು ಗ್ರಾಮಪಂಚಾಯತ್ ಚುನಾವಣೆಗೆ ತಯಾರಿ ಸಭೆ

ಸಂಪಾಜೆ : ಜು12 ವಲಯ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಸಭೆ ಕಲ್ಲುಗುಂಡಿಯ ಕಲ್ಲುಂಪುರತ್ ಕಾಂಪ್ಲೆಕ್ಸಿ ನಲ್ಲಿ ದಿನಾಂಕ 12 ರಂದು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಮತ್ತು ಸಂಪಾಜೆ ವಲಯ ಕಾಂಗ್ರೆಸ್ ಪ್ರಭಾರ ಅಧ್ಯಕ್ಷರಾದ ಶ್ರೀ ವಸಂತ ಪೆಲ್ತಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ SIR ಪ್ರಗತಿ ಪರಿಶೀಲನೆಯ ಬಗ್ಗೆ BLA-2 ಗಳೊಂದಿಗೆ ಚರ್ಚಿಸಲಾಗಿ ಕೆಲವು ಮತದಾರರಿಗೆ ಎನ್ಯುಮರೇಷನ್ ಫಾರ್ಮ್ ತುಂಬಲು ಕಷ್ಟವಾಗುತ್ತಿರುವ ಬಗ್ಗೆ ಮಾಹಿತಿ ದೊರಕಿರುವ ಕಾರಣ ಇಂತಹವರಿಗೆ ಸಹಾಯ ಮಾಡುವ ದೃಷ್ಟಿಯಿಂದ 14 ಮತ್ತು 15 ರಂದು ಕಲ್ಲುಗುಂಡಿಯ ಕಲ್ಲುಂಪುರತ್ ಕಾಂಪ್ಲೆಕ್ಸ್ ನಲ್ಲಿನ ಕಛೇರಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಎರಡು ದಿನಗಳ ಕಾಲ ಎನ್ಯುಮರೇಷನ್ ಫಾರ್ಮ್ ತುಂಬಲು ಅರಿವಿಲ್ಲದವರಿಗೆ BLA-2 ಗಳ ಮೂಲಕ ತುಂಬಲು ಸಹಾಯದ ಅಭಿಯಾನ ಮಾಡಲು ನಿರ್ಧರಿಸಲಾಯಿತು.ಸಂಪಾಜೆ ಗ್ರಾಮದ ಯಾವೊಬ್ಬ ಮತದಾರನೂ ಮತದಾನದ ಹಕ್ಕಿನಿಂದ ವಂಚಿತನಾಗಬಾರದು ಎನ್ನುವ ಕಾರಣಕ್ಕೆ, ಪರಿಶೀಲನೆಗಾಗಿ BLA-2 ರವರ ಸಹಾಯಕ್ಕಾಗಿ ಸಂಪಾಜೆ ಗ್ರಾಮದ ಪ್ರತೀ ವಾರ್ಡ್ಗಳಿಗೆ ಪಕ್ಷದಿಂದ ಪ್ರತಿನಿಧಿಗಳು ಮತದಾರರನ್ನು ಬೇಟಿನೀಡಲು ತೀರ್ಮಾನಿಸಲಾಯಿತು.ಹಾಗೂ ಇತ್ತೀಚೆಗೆ ಕೆ.ಪಿ.ಸಿ.ಸಿಯಿಂದ ಮಾಡಿರುವ ನಿರ್ದೇಶನದಂತೆ ಗ್ರಾಮಪಂಚಾಯತ್ ಚುನಾವಣೆಗೆ ತಯಾರಿ ನಡೆಸಲಾಯಿತು. ಮತ್ತು ಗ್ರಾಮಪಂಚಾಯತ್ ಚುನಾವಣೆಗೆ ಸ್ಪರ್ಧಾಳುಗಳ ವಿವರ ಸಂಗ್ರಹಣೆಯೂ ನಡೆಯಿತು.ಈ ಸಭೆಯಲ್ಲಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರಾದ ಜಾನಿ. ಕೆ.ಪಿ, ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಮಹಮ್ಮದ್ ಕುಂಞಿ ಗೂನಡ್ಕ,ಜಿಲ್ಲಾ ಅಸಂಘಟಿತ ಕಾರ್ಮಿಕರ ಸಮಿತಿಯ ಪ್ರದಾನ ಕಾರ್ಯದರ್ಶಿ ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ವಿ ಜ್ಞಾನಶೀಲನ್ ರಾಜು, ಇವರು ಮಾತನಾಡಿದರು .ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿಯಾದ ಶ್ರೀಮತಿ ಪ್ರಮೀಳಾ ಪೆಲ್ತಡ್ಕ , ಸಂಪಾಜೆ ಗ್ರಾಮಪಂಚಾಯತ್ ಮಾಜೀ ಉಪಾಧ್ಯಕ್ಷರಾದ ಶ್ರೀಮತಿ ಲೆಸ್ಸಿ ಮೊನಾಲಿಸಾ, ಸಂಪಾಜೆ ಗ್ರಾಮ ಪಂಚಾಯತ್ ಮಾಜೀ ಸದಸ್ಯರಾದ ಬೆಂಜಮಿನ್ ಡಿಸೋಜ , ಮಹಿಳಾ ಕಾಂಗ್ರೆಸ್ ನಾಯಕಿ ಶ್ರೀಮತಿ ಇಂದಿರಾ ಸಂಕೇಶ್ ,ಅಡ್ವೋಕೇಟ್ ಡೋಮಿನಿಕ್ , ಸಂಕೇಶ್ ಚಂದ್ರಶೇಖರ , ಒಂದನೇ ವರ್ಡ್ ನಾಯಕ ನಾಗಮುತ್ತು ನೆಲ್ಲಿಕುಮೇರಿ, ಬಿ.ಎಲ್ .ಎ.2 ಕೆರೋಲಿನ್ ಕ್ರಾಸ್ತ , ಕಾರ್ಮಿಕ ನಾಯಕರು ಬಿ.ಎಲ್.2 ಆದ ಶ್ರೀಧರ ಕಡೆಪಾಲ ,ಸಾಜಿದ್ ಗೂನಡ್ಕ , ಸಾಮಾಜಿಕ ಜಾಲತಾಣದ ಅಧ್ಯಕ್ಷ ಬಾಲಚಂದ್ರ ಗೂನಡ್ಕ, ವಲಯ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಲೂಕಾಸ್ ಟಿ.ಐ , ಸಂತ ಪ್ರಾನ್ಸಿಸ್ ಕ್ಷೇವಿಯರ್ ಚರ್ಚ್ ಕಲ್ಲುಗುಂಡಿ ಇದರ ಮಾಜೀ ಉಪಾಧ್ಯಕ್ಷರಾದ ಸಿಲ್ವೆಸ್ಟರ್ ಡಿಸೋಜ, ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಶ್ರೀಮತಿ ಫಿಲೋಮಿನಾ ಕ್ರಾಸ್ತ. ಕುಮಾರಿ ಪ್ರೀತಿ ಉಪಸ್ತಿತರಿದ್ದರು .ವಸಂತ ಗೌಡ ಸ್ವಾಗತಿಸಿ ರಾಜು ನೆಲ್ಲಿಕುಮೇರಿ ದನ್ಯವಾದ ಸಲ್ಲಿಸಿದರು.

Leave a Reply

Discover more from

Subscribe now to keep reading and get access to the full archive.

Continue reading