






-
ಮಾತುಕತೆಗೆ ಮುಕ್ತವಾಗಿದ್ದರೂ ಮಾತುಕತೆ ಮಾಡಿ ಸಂಪಾಜೆಯಲ್ಲಿ ಕಾಂಗ್ರೆಸ್ ಉಳಿಸಲು ಕನಿಷ್ಟ ಪ್ರಯತ್ನ ನಡೆಸದೆ ಬಿಜೆಪಿ ಮೆಂಟಾಲಿಟಿ ಪ್ರದರ್ಶಿಸುತ್ತಿರುವ ಬೊಳ್ಳೂರು ಅವರ ಸೈದ್ದಾಂತಿಕ ನಿಲುವಿನ ಬಗ್ಗೆ ಸಂಶಯ ವ್ಯಕ್ತ ಪಡಿಸಿದ ಸಂಪಾಜೆ ಕಾಂಗ್ರೆಸ್.
-
ಬ್ಲಾಕ್ ಅಧ್ಯಕ್ಷನಾಗಲು ನನಗೊಂದು ಅವಕಾಶ ಕೊಡಿ, ನಾನು ಅಧ್ಯಕ್ಷ ಆದರೆ ಒಂದು ವಾರದೊಳಗೆ ನಿಮ್ಮ ಸಂಪಾಜೆಯ ಸಮಸ್ಯೆಗೆ ಇತಿಶ್ರೀ ಹಾಡುತ್ತೇನೆ, ಎಂದು ನೇರವಾಗಿ ಮತ್ತು ವಿವಿಧ ವ್ಯಕ್ತಿಗಳ ಮೂಲಕ ಸಂಪಾಜೆಯ ನಾಯಕರ ದುಂಬಾಲು ಬಿದ್ದಿದ್ದ ರಾಧಾಕೃಷ್ಣ ಬೊಳ್ಳೂರು,ಅಧ್ಯಕ್ಷರಾದಮೇಲೆ ಈವರೆಗೂ ಆ ವಿಚಾರವಾಗಿ ಕನಿಷ್ಟ ಪ್ರಯತ್ನವನ್ನೂ ಮಾಡಿರಲಿಲ್ಲ. ಅದರೆ ಕದ್ದುಮುಚ್ಚಿ ಪಕ್ಷವಿರೋಧೀ ಗುಂಪುಗಳ ಪರವಾಗಿ ಎಲ್ಲವನ್ನೂ ಮಾಡುತ್ತಿದ್ದ ಕಾರಣ ಸಹಜವಾಗಿ ಅವರ ನಿಲುವಿನ ವಿರುದ್ಧ ಸಂಪಾಜೆ ಕಾಂಗ್ರೆಸ್ ಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈಗಲೂ ಸಂಪಾಜೆಯಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾಗುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನವನ್ನೂ ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಸಂಪಾಜೆ ಕಾಂಗ್ರೆಸ್ ಪ್ರಭಾರ ಅಧ್ಯಕ್ಷ ವಸಂತ ಪೆಲ್ತಡ್ಕ ಮತ್ತು ಪ್ರದಾನ ಕಾರ್ಯದರ್ಶಿ ಲೂಕಾಸ್ ಟಿ.ಐ. ಜಂಟಿ ಪತ್ರಿಕಾ ಹೇಳಿಕೆ ನೀಡಿರುತ್ತಾರೆ.
-
ಸಂಪಾಜೆ ಕಾಂಗ್ರೆಸ್ ಸಭೆ ಸೇರಿ ಅಲ್ಲಿ ರೂಪುಗೊಂಡ ನಿರ್ಣಯದ ಪ್ರಕಾರ ಬೊಳ್ಳೂರು ಅವರಿಗೆ ಮನವಿ ಮಾಡಲಾಗಿತ್ತು. ಅದಕ್ಕೆ ಕನಿಷ್ಟ ಪ್ರತಿಕ್ರಿಯೆ ಕೂಡಾ ನೀಡಲಿಲ್ಲ. ಪತ್ರಿಕೆಯಲ್ಲಿ ಬರುವಂತೆ ಮಾಡಿದ ಕಾರಣ ನಾನು ಸಂಪಾಜೆಯ ಕಾಂಗ್ರೆಸ್ಸಿಗೆ ಯಾವತ್ತೂ ವಿರುದ್ದವೇ ಎಂದು ಬೇರೆಯವರ ಬಳಿ ಹೇಳಿದ್ದು ನಮಗೆ ತಲುಪಿರುತ್ತದೆ.
ಅಲ್ಲದೆ, ಇತ್ತೀಚೆಗೆ ಸಂಪಾಜೆಯಲ್ಲಿ SIR ಜಾಗೃತಿ ಕಾರ್ಯಕ್ರಮ ಎನ್ನುವ ಮುಖವಾಡದ ಅಡಿಯಲ್ಲಿ ಪಕ್ಷದವರಲ್ಲದವರನ್ನು ಕೂರಿಸಿ ಅಲ್ಲಿ ಸೇರಿದ್ದವರಿಗೇ ಅರಿವಿಲ್ಲದೆ, ಸಂಪಾಜೆ ಗ್ರಾಮ ಕಾಂಗ್ರೆಸ್ ಸಮಿತಿ ಎಂದು ಬ್ಯಾನರ್ ಹಾಕಿ ಕಾಂಗ್ರೆಸ್ ಕಾರ್ಯಕ್ರಮದಂತೆ ಮಾಡಿ ಬ್ಲಾಕ್ ಆಢಳಿತ ಪ್ರದಾನ ಕಾರ್ಯದರ್ಶಿ ಉಪಸ್ಥಿತರಿದ್ದು ಕಾರ್ಯಕ್ರಮ ಮಾಡಿರುವುದು,
ಸಂಪಾಜೆ ಗ್ರಾಮದವರೇ ಆಗಿದ್ದು ರಾಜ್ಯ ಮತ್ತು ಜಿಲ್ಲೆಯಲ್ಲಿ ಪಕ್ಷದಲ್ಲಿ ಅಧಿಕೃತ ಸ್ಥಾನ ವಹಿಸುವ ನಾಯಕರಿಗೆ ತಿಳಿಸಿಲ್ಲ ಸಮಿತಿಯ ಪ್ರಮುಖ ನಾಯಕರಿಗೂ ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೂ ತಿಳಿಸದೆ, ಪಕ್ಷವಿರೋಧದ ಆರೋಪ ಹೊತ್ತಿರುವವರೊಂದಿಗೆ ಮತ್ತು ಉಚ್ಚಾಟಿಸಲ್ಪಟ್ಟವರೊಂದಿಗೆ ಸೇರಿ ಕದ್ದು ಮುಚ್ಚಿ ಗುಂಪು ಕಟ್ಟಿರೋದು ತನ್ನ ನಾಯಕತ್ವದ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದ ರಾಧಾಕೃಷ್ಣ ಬೊಳ್ಳೂರು ಅವರ ನಾಯಕತ್ವ ನಿಜವಾಗಿಯೂ ಎಷ್ಟು ಕಳಪೆ ಎನ್ನೋದಕ್ಕೆ ಸಾಕ್ಷಿಯಾಗಿದೆ. ಎಂದು ಸಂಪಾಜೆ ಕಾಂಗ್ರೆಸ್ ದೂರಿದೆ.
ಇತ್ತೀಚೆಗೆ ಸಂಪಾಜೆಯ ಕಾಂಗ್ರೆಸ್ ಸಮಿತಿಯಲ್ಲಿ ಆದ ನಿರ್ಣಯದ ಪ್ರತಿಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೊಳ್ಳೂರು ಅವರ ಕೈಯಲ್ಲಿ ಕೊಟ್ಟದ್ದು ,24 ಗಂಟೆಯ ಒಳಗೆ ಈ ಪತ್ರವು ಹಿಂದೆ ಕಾಂಗ್ರೆಸ್ ನಾಯಕರೊಬ್ಬರು ದೂರವಾಣಿ ಮೂಲಕ ತನ್ನೊಂದಿಗೆ ಚರ್ಚಿಸಿದ್ದನ್ನು ವೈರಲ್ ಗೊಳಿಸಿದ ಮತ್ತು ಪಕ್ಷವಿರೋಧಿ ಚಟುವಟಿಕೆಗೆ ಜಿಲ್ಲಾಧ್ಯಕ್ಷರಿಂದ ಆರು ವರ್ಷಗಳ ಕಾಲ ಉಚ್ಚಾಟನೆಗೊಳಗಾದ ವ್ಯಕ್ತಿಯ ಮೊಬೈಲ್ ಮೂಲಕ ಇಡೀ ತಾಲೂಕಿನಲ್ಲಿ ಹರಿದಾಡುವಂತೆ ಮಾಡಲಾಯಿತು .ಇದು ಬೊಳ್ಳೂರು ಯಾರ ಅಡಿಯಾಳುಗಳಾಗಿದ್ಧಾರೆ ಎನ್ನೋದಕ್ಕೆ ಸಾಕ್ಷಿಯಾಗಿದೆ. ಮತ್ತು ಇದರ ಅಧಿಕೃತ ದಾಖಲೆ ನಮ್ಮ ಕೈಯಲ್ಲಿ ಇದೆ ಎಂದು ವಸಂತ ಗೌಡ ಮತ್ತು ಲೂಕಾಸ್ ಟಿ.ಐ ಯವರು ಆರೋಪಿಸಿದರು.
ಈಗ ನಾನು ಅಧ್ಯಕ್ಷ ಆದನಂತರ ಸಂಪಾಜೆಯಲ್ಲಿ ಕಾಂಗ್ರೆಸ್ ಸಮಿತಿಯೇ ಇಲ್ಲ ಎನ್ನುವ ಬೊಳ್ಳೂರು ಅವರಿಗೆ ಅದೇ ಮಾನದಂಡದ ಪ್ರಕಾರ ಕೆಪಿಸಿಸಿ ಅಧ್ಯಕ್ಷರು ಬದಲಾಗಿರೋದು ಗೊತ್ತಾಗಲಿಲ್ಲವೇ? ಎಂದು ಪ್ರಶ್ನಿಸಿರುತ್ತಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆಯೆಂದರೆ ಸರ್ವಾಧಿಕಾರಿ ಹುದ್ದೆ ಅಲ್ಲ ಅದಕ್ಕೊಂದು ಸಮಿತಿಯಿದೆ. ಬ್ಲಾಕಿನ ತೀರ್ಮಾನಗಳ ಬಗ್ಗೆ ಆ ಸಮಿತಿಯಲ್ಲಿ ಚರ್ಚಿಸಿ ನಿರ್ಣಯ ಮಾಡಬೇಕಿದೆ. ಸಂಪಾಜೆಯ ವಿಷಯ ಯಾಕೆ ಯಾವುದೇ ಸಭೆಯಲ್ಲಿ ಚರ್ಚಿಸಿಲ್ಲ. ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಈಯೆಲ್ಲಾ ಘಟನೆಗಳನ್ನು ನೋಡಿದಾಗ ಬೊಳ್ಳೂರು ಅವರು ಬಿಜೆಪಿ ಬಿಟ್ಟು ಬಂದಿರೋದು ಸಂಪಾಜೆಯಲ್ಲಿ ಕಾಂಗ್ರೆಸ್ ಅನ್ನು ಮುಗಿಸುವ ಮೂಲಕ ಸುಳ್ಯವನ್ನು ಕಾಂಗ್ರೆಸ್ ಮುಕ್ತ ಮಾಡುವ ತಂತ್ರಗಾರಿಕೆಯ ಭಾಗವೇ ಎನ್ನುವ ಭಲವಾದ ಸಂಶಯ ಕಾಡುತ್ತಿದೆ. ಇಲ್ಲವಾದರೆ ಮಾತುಕತೆಗೆ ಮುಕ್ತವಾಗಿದ್ದ ಅದಕ್ಕಾಗಿ ಮನವಿಮಾಡಿದರೂ ಕಳೆದ 30 ವರ್ಷಗಳಿಂದಲೂ ಕಾಂಗ್ರೆಸ್ ಅನ್ನು ಉಳಿಸಿದ ಕೀರ್ತಿ ಇರುವ ಸಂಪಾಜೆ ಕಾಂಗ್ರೆಸ್ಸಿನೊಂದಿಗೆ ಹೀಗೆ ವರ್ತಿಸುತ್ತಿದ್ದರೇ ? ಎನ್ನುವ ಪ್ರಶ್ನೆ ಹುಟ್ಟುತ್ತಿದೆ. ಇವರು ಮಾತುಕತೆಯಲ್ಲಿ ನಂಬಿಕೆಯಿಲ್ಲದೆ ಪಕ್ಷಪಾತಿಯಾಗಿ ನಡಕೊಳ್ಳುತ್ತಾರೆಂದರೆ ಇವರು ಬ್ಲಾಕ್ ಅಧ್ಯಕ್ಷ ಹುದ್ದೆಗೆ ಯೋಗ್ಯರಲ್ಲದ ಕಾರಣ ರಾಜಿನಾಮೆ ಕೊಟ್ಟು ಹೊರನಡೆಯುವುದು ಉತ್ತಮ . ಮತ್ತು ಈ ವಿಷಯವಾಗಿ ಸುಳ್ಯದ ಹಿರಿಯ ಕಾಂಗ್ರೆಸ್ ನಾಯಕರು ಮೌನ ಮುರಿಯಬೇಕೆಂದು ಈ ಮೂಲಕ ಮನವಿಯನ್ನು ಮಾಡುತ್ತಿದ್ದೇವೆ ಎಂದು ಸಂಪಾಜೆ ವಲಯ ಕಾಂಗ್ರೆಸ್ ಸಮಿತಿಯ ಪರವಾಗಿ ವಸಂತ ಗೌಡ ಪೆಲ್ತಡ್ಕ ಮತ್ತು ಲೂಕಾಸ್ ಟಿ.ಐ ಪತ್ರಿಕಾ ಹೇಳಿಕೆ ನೀಡಿರುತ್ತಾರೆ.

