ಸಲಿಂಗ ದೌರ್ಜನ್ಯ ಗೈದು ಒಂಬತ್ತು ವರ್ಷದ ಬಾಲಕನನ್ನು ಕೊಂದ ಅಪ್ರಾಪ್ತ ಹುಡುಗ

ತಮಿಳುನಾಡಿನಲ್ಲಿ ಅತ್ಯಂತ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಒಂಬತ್ತು ವರ್ಷದ ಬಾಲಕನೊಬ್ಬನನ್ನು ಸಲಿಂಗ ದೌರ್ಜನ್ಯ ನಡೆಸಿ ಕೊಲೆ ಮಾಡಿದ ಆರೋಪದ ಮೇಲೆ ಹದಿನೇಳು ವರ್ಷದ ಅಪ್ರಾಪ್ತ ಹುಡುಗನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಬೆನ್ನಟ್ಟಿದ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ, ಆರೋಪಿ ಅಪ್ರಾಪ್ತ ಹುಡುಗ ತಾನು ಮಾಡಿದ ಕೃತ್ಯವನ್ನು ಪೊಲೀಸರ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ.
ಆರೋಪಿಗೆ ಇನ್ನು ಹದಿನೆಂಟು ವರ್ಷ ತುಂಬದ ಕಾರಣ, ಆತನನ್ನು ಕಾನೂನು ಪ್ರಕ್ರಿಯೆಗಳ ಪ್ರಕಾರ ಸದ್ಯ ರಿಮಾಂಡ್ ಹೋಮ್ ಅಥವಾ ಬಾಲಾಪರಾಧಿಗಳ ಸುಧಾರಣಾ ಗೃಹಕ್ಕೆ ಸೇರಿಸಲಾಗಿದೆ. ಪೊಲೀಸರು ಪ್ರಕರಣದ ಕುರಿತು ಮುಂದಿನ ತನಿಖೆ ಮತ್ತು ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading