ಕನಕಮಜಲಿನ ನಿವಾಸಿ ಬಾತಿಷಾ ಎಂಬವರ ಪತ್ನಿ ಸರಪುನ್ನಿಸ ಎಂಬ ವರು ಜ್ವರ ಹಾಗು ಕೆಮ್ಮು ವಿಗೆ ಜಾಲ್ಸೂರಿನ ಕ್ಲಿನಿಕ್ ಗೆ ಭೇಟಿ ನೀಡಿ ಔಷಧಿ ಪಡೆದು ಸೇವಿಸಿದ ನಂತರ, ಮತ್ತಷ್ಟು ಅಸ್ವಸ್ಥ ಗೊಂಡ ವರದಿಯಾಗಿದೆ..
ರೋಗಿಯು ನಂತರ ಔಷಧಿಯ ಬಾಟಲಿಯನ್ನು ಪರಿಶೀಲಿಸಿದಾಗ, ದಿನಾಂಕ ನಮೂದಿಸಿರುವ ಜಾಗವನ್ನು ಮಾರ್ಕರ್ ಪೆನ್ನಿನಿಂದ ಗೀಚಿ, ಅವಧಿ ಮುಕ್ತಾಯದ (Expiry) ದಿನಾಂಕ ಕಾಣದಂತೆ ಮಾಡಿರುವುದು ಗಮನಕ್ಕೆ ಬಂತು.
“ಮಾರ್ಕರ್ ಗೀಚಿದ್ದನ್ನು ಸ್ಪ್ರೇ ಹಾಕಿ ಪರಿಶೀಲಿಸಿದಾಗ ಸುಮಾರು ಒಂದೂವರೆ ತಿಂಗಳ ಹಿಂದೆ ಅವಧಿ ಮೀರಿದ್ದ ಔಷಧಿಯನ್ನು ವೈದ್ಯರು ನೀಡಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಈಗಾಗಲೇ ರೋಗಿಯ ಕಡೆಯವರು ತಾಲೂಕು ಆರೋಗ್ಯಾಧಿಕಾರಿಗೆ ಹಾಗು ಜಿಲ್ಲಾ ಆರೋಗ್ಯಾಧಿಕಾರಿಗೂ ದೂರನ್ನು ನೀಡಿರುವ ಬಗ್ಗೆ ವರದಿ ಯಾಗಿದೆ…
ಇಂತಹ ಗ್ರಾಮೀಣ ಪ್ರದೇಶದ ಜನರು ವೈದ್ಯರ ಮೇಲೆ ನಂಬಿಕೆ ಇಟ್ಟುಕೊಂಡಿರುವ ಸಂದರ್ಭದಲ್ಲಿ, ಈ ರೀತಿಯ ನಿರ್ಲಕ್ಷ್ಯ ಅಥವಾ ತಪ್ಪು ನಡೆ ಜನರ ಜೀವಕ್ಕೆ ಅಪಾಯ ಉಂಟುಮಾಡಿದರೆ ಅದರ ಹೊಣೆ ಯಾರು ಎಂಬುದು ಸಾರ್ವಜನಿಕ ದಲ್ಲಿ ಚರ್ಚೆಗೆ ಕಾರಣ ವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರೋಗಿ ಯ ಕಡೆಯವರು ಹಾಗು ಸಾರ್ವಜನಿಕರು ವಿನಂತಿಸುತ್ತಿದ್ದಾರೆ..

