ಪ್ರಗತಿ ಅಚ್ಚು ಸೇರಿದಂತೆ ಸಾಧಕರಿಗೆ ಸನ್ಮಾನ


ಸಾಕಾರ ನ್ಯೂಸ್: ಆರ್. ಪಿ. ಕಲಾ ಸೇವಾ ಟ್ರಸ್ಟ್ (ರಿ) ಪಂಜ ಇವರ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಗಾನ ಶಾರದೆ ಗಾಯನ ಸ್ಪರ್ಧೆಯ ಸೀಸನ್-05 ರ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವು ಸುಳ್ಯದ ಎ.ಎಸ್. ವಿಜಯ್ ಕುಮಾರ್ ಸಭಾಭವನದಲ್ಲಿ ಜರುಗಿತು. ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.
ಅಂಬ್ಯುಲೆನ್ಸ್ ಚಾಲನೆ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಮಾಡಿರುವ ಅಪೂರ್ವ ಸಾಧನೆಗಾಗಿ ಅಂಬ್ಯುಲೆನ್ಸ್ ಚಾಲಕ ಮತ್ತು ಮುಳುಗು ತಜ್ಞರಾದ ಅಬ್ದುಲ್ ರಜಾಕ್ (ಅಚ್ಚು) ಅವರನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.
ಇವರೊಂದಿಗೆ ಸಮಾಜದ ವಿವಿಧ ರಂಗಗಳಲ್ಲಿ ವಿಶಿಷ್ಟ ಕೊಡುಗೆ ನೀಡಿದ ಗಣ್ಯರಾದ ನಿವೃತ್ತ ಯೋಧ ಹರೀಶ್ ಬೊಳಗಲ್ಲು, ಪಶುವೈದ್ಯಾಧಿಕಾರಿ ನಿತಿನ್ ಪ್ರಭು, ದೈವ ನರ್ತಕ ವಿಜಿತ್ ಮೈತಡ್ಕ, ಪ್ರಗತಿಪರ ಕೃಷಿಕ ಸುಬ್ರಾಯ ನಿರ್ಕಜೆ, ನಿರೂಪಕಿ ಶ್ರೇಯ ಎಂ.ಜಿ., ಯೋಗಪಟು ಗೌರಿತ, ಸುಬ್ರಾಯ ಕಲ್ಪಣೆ, ಗೋಪಾಲಕೃಷ್ಣ ಹಾಗೂ ಪ್ರಸನ್ನಾಂಜನೇಯ ಭಜನಾ ಮಂಡಳಿ ಅಂಜನಾದ್ರಿ ಅಡ್ಯಾರ್ ಅವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಿಮ್ಮದೊಂದು ಉತ್ತರ