ಇಂದು,ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಗೂನಡ್ಕ ಇಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಹ ಶಿಕ್ಷಕಿಯಾದ ಫಾತಿಮತ್ ದಿಲ್ ಶಾನ ಇವರು ಯೋಗದ ಮಹತ್ವದ ಬಗ್ಗೆ ತಿಳಿಸುತ್ತಾ, ಯೋಗ ಎಂಬುವುದು ಕೇವಲ ಆಚರಣೆ ಮಾತ್ರವಲ್ಲ ಅದು ವ್ಯಕ್ತಿಯ ಜೀವನ ಶೈಲಿ. ಆಧುನಿಕತೆ ಮತ್ತು ತಂತ್ರಜ್ಞಾನದ ಯುಗದಲ್ಲಿ ಉತ್ತಮ ಹಾಗೂ ಆರೋಗ್ಯಕರವಾದ ಜೀವನವನ್ನು ನಡೆಸಲು ಮತ್ತು ಮನುಷ್ಯನ ಸಾಧನೆಗಳಿಗೆ ಅವನ ದಿನನಿತ್ಯದ ಸರಳ ಜೀವನ ಶೈಲಿಯ ಅನುಸರಣೆಯ ಮಾರ್ಗ ಮತ್ತು ಇದಕ್ಕೆ ಯೋಗವು ಮೂಲ ತಳಹದಿಯಾಗಿದೆ ಎಂದು ತಮ್ಮ ಮಾತುಗಳಲ್ಲಿ ತಿಳಿಸಿದರು.
ನಂತರ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರು ಆಸನಗಳನ್ನು ಮಾಡುವುದರ ಮೂಲಕ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.




