ಅರಂತೋಡು: ಮದರಸದಲ್ಲಿ ಸಂಭ್ರಮದ ‘ಮುಅಲ್ಲಿಮ್ ಡೇ’ ಆಚರಣೆ; ಉಸ್ತಾದರುಗಳಿಗೆ ಗೌರವ ಸಮರ್ಪಣೆ

ಎಸ್.ಕೆ.ಎಸ್.ಬಿ.ವಿ. ನುಸ್ರತ್ತುಲ್ ಇಸ್ಲಾಂ ಮದರಸ ಅರಂತೋಡು ಇದರ ಆಶ್ರಯದಲ್ಲಿ ಜೂನ್ 21ರಂದು ಮದರಸ ಸಭಾಂಗಣದಲ್ಲಿ ‘ಮುಅಲ್ಲಿಮ್ ಡೇ’ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷರಾದ ಆಶ್ರಫ್ ಗುಂಡಿ ಅವರು ವಹಿಸಿದ್ದರು. ಸದರ್ ರವೂಫ್ ಅಝ್ಹರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು. ಮದರಸ ಉಸ್ತುವಾರಿ ಅಮೀರ್ ಕುಕ್ಕುಂಬಳ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರನ್ನು ಮತ್ತು ನೆರೆದಿದ್ದವರನ್ನು ಸ್ವಾಗತಿಸಿದರು.


ಮುಅಲ್ಲಿಮ್ ಡೇ ಮಹತ್ವದ ಕುರಿತು ಸಂದೇಶ ಭಾಷಣ ಮಾಡಿದ ಅರಂತೋಡು ಬದ್ರಿಯ ಜುಮಾ ಮಸೀದಿಯ ಖತೀಬರಾದ ಬಹು| ಆಸಿಫ್ ಅಝ್ಹರಿ ಅವರು, “ಯಾವುದೇ ಸ್ವಾರ್ಥವಿಲ್ಲದೆ ನಿಸ್ವಾರ್ಥ ಸೇವೆಯ ಮೂಲಕ ಸಮಾಜದಲ್ಲಿ ಧಾರ್ಮಿಕ ಜ್ಞಾನದ ಬೆಳಕನ್ನು ಪಸರಿಸುತ್ತಿರುವ ನಮ್ಮ ಉಸ್ತಾದರುಗಳನ್ನು ಇಂದಿನ ದಿನಗಳಲ್ಲಿ ಗೌರವಿಸುವ ಬದಲು ಮರೆಯುವ ಕಾಲ ಎದುರಾಗಿದೆ. ಈ ನಿಟ್ಟಿನಲ್ಲಿ ಸಮಸ್ತದ ನಿರ್ದೇಶನದಂತೆ ಪ್ರತಿ ವರ್ಷ ಮದರಸಗಳಲ್ಲಿ ಮುಅಲ್ಲಿಮ್ ಡೇ ಆಚರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿ, ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ” ಎಂದು ಮಾರ್ಗದರ್ಶನ ನೀಡಿದರು.


ಕಾರ್ಯಕ್ರಮದಲ್ಲಿ ಸಹಾಯ ಅಧ್ಯಾಪಕರಾದ ಅಬ್ದುಲ್ ರಹಿಮಾನ್ ಝುಹರಿ, ಸಲಹಾ ಸಮಿತಿ ಸದಸ್ಯರಾದ ಹಾಜಿ ಬದರುದ್ದೀನ್ ಪಠೇಲ್ ಮತ್ತು ಎಸ್.ಕೆ.ಎಸ್.ಎಸ್.ಎಫ್. ತಾಲೂಕು ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.


ಇದೇ ಸಂದರ್ಭದಲ್ಲಿ ಮದರಸದ ಅಧ್ಯಾಪಕರನ್ನು ಎಸ್.ಕೆ.ಎಸ್.ಬಿ.ವಿ. ಪದಾಧಿಕಾರಿಗಳು ಶಾಲು ಹೊದಿಸಿ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಿದರು.
ವೇದಿಕೆಯಲ್ಲಿ ಜಮಾಅತ್ ಉಪಾಧ್ಯಕ್ಷರಾದ ಹಾಜಿ ಕೆ.ಎಂ. ಮಹಮ್ಮದ್, ಕೋಶಾಧಿಕಾರಿ ಕೆ.ಎಂ. ಅಬೂಬಕ್ಕರ್ ಪಾರೆಕ್ಕಲ್, ನಿರ್ದೇಶಕರುಗಳಾದ ಹಾಜಿ ಅಬ್ದುಲ್ ಖಾದರ್ ಪಠೇಲ್, ಎ. ಹನೀಫ್, ಮುಜೀಬ್ ಅರಂತೋಡು, ಎಸ್.ಕೆ.ಎಸ್.ಎಸ್.ಎಫ್. ಅಧ್ಯಕ್ಷ ಜುಬೈರ್ ಎಸ್.ಇ., ಕಾರ್ಯದರ್ಶಿ ಸಂಶುದ್ದೀನ್ ಕ್ಯೂರ್ ಹಾಗೂ ಪ್ರಮುಖರಾದ ಸೂಫಿ, ಆಶಿಕ್ ಕುಕ್ಕುಂಬಳ, ಹಮೀದ್ ಎ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ರುಫೈಝ್ ಅವರು ಸಮಗ್ರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

Leave a Reply

Discover more from

Subscribe now to keep reading and get access to the full archive.

Continue reading