
ಒಮಾನ್ ದೇಶದ ಹರ್ಮುಜ್ ಜಲಸಂಧಿ ಬಳಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದ ಮೇರೆಗೆ ನಡೆದ ದಾಳಿಯಲ್ಲಿ ಜಲ್ ವೀರ್ ಹಡಗಿನ ನಾವಿಕ, 23 ವರ್ಷದ ಯುವಕ ಆದಿತ್ಯ ಶರ್ಮಾ ಅಸುನೀಗಿದ್ದಾನೆ. ಈತ ತನ್ನ ತಂದೆ ತಾಯಿಗೆ ಇದ್ದ ಏಕೈಕ ಮಗನಾಗಿದ್ದ.

ಮೃತ ಯುವಕ ಆದಿತ್ಯ ಶರ್ಮಾನ ತಂದೆ ರಾಜೇಶ್ ಶರ್ಮಾ ತೀವ್ರಗಾಮಿ ಸಿದ್ಧಾಂತದ ಬೆಂಬಲಿಗರಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಬಲಪಂಥೀಯ ಧೋರಣೆ ಹೊಂದಿದ್ದ ಅವರು, ಗಾಜಾ ಮತ್ತು ಇರಾನ್ ಪ್ರಾಂತ್ಯಗಳಲ್ಲಿ ಮುಗ್ಧ ಮಕ್ಕಳು ಮತ್ತು ನಾಗರಿಕರು ದಾಳಿಗೆ ಬಲಿಯಾಗುತ್ತಿದ್ದಾಗ ಅದನ್ನು ನೋಡಿ ವಿಕೃತ ಆನಂದ ಪಡುತ್ತಿದ್ದರು ಎನ್ನಲಾಗಿದೆ. ಇಸ್ರೇಲ್ ಮತ್ತು ಅಮೆರಿಕದ ದಾಳಿಗಳನ್ನು ಸಮರ್ಥಿಸುತ್ತಾ, ಆ ಪ್ರದೇಶಗಳನ್ನು ಮುಸ್ಲಿಂ ರಹಿತ ಮಾಡಬೇಕೆಂದು ಪ್ರತಿಪಾದಿಸುತ್ತಿದ್ದರು. ಅಷ್ಟೇ ಅಲ್ಲದೆ, ದೇಶದ ರಾಜಕಾರಣದಲ್ಲಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ತೀವ್ರ ನಿಂದನೆ ಮಾಡುತ್ತಾ, ಆಡಳಿತಾರೂಢ ಬಿಜೆಪಿ ಸರ್ಕಾರದ ಪರ ಅಂಧಭಕ್ತಿ ಪ್ರದರ್ಶಿಸುತ್ತಿದ್ದರು.

ಯಾವ ಅಮೆರಿಕ ಮತ್ತು ಇಸ್ರೇಲ್‌ನ ಯುದ್ಧದಾಹವನ್ನು ರಾಜೇಶ್ ಶರ್ಮಾ ಸಮರ್ಥಿಸುತ್ತಿದ್ದರೋ, ಅದೇ ಅಮೆರಿಕ ನಡೆಸಿದ ದಾಳಿಗೆ ಇಂದು ಅವರದೇ ಹೆತ್ತ ಮಗ, ಇಡೀ ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದ ಆದಿತ್ಯ ಶರ್ಮಾ ಬಲಿಯಾಗಿದ್ದಾನೆ.

ಘಟನೆಯ ನಂತರ ರಾಜೇಶ್ ಶರ್ಮಾ ಅವರ ಸಿದ್ಧಾಂತ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಮಾಧ್ಯಮಗಳ ಮುಂದೆ ಕಣ್ಣೀರಿಡುತ್ತಿರುವ ಅವರು, ತಾವು ಅತಿಯಾಗಿ ನಂಬಿದ್ದ ಪ್ರಧಾನಿ ಮೋದಿ ಸರ್ಕಾರ ತಮಗೆ ನ್ಯಾಯ ಮತ್ತು ಸಾಂತ್ವನ ನೀಡಲಿ ಎಂದು ಕಾಯುತ್ತಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಮಗನ ಸಾವಿಗೆ ಕಾರಣವಾದ ಅಮೆರಿಕ ಮತ್ತು ಇಸ್ರೇಲ್ ದೇಶಗಳ ಮೇಲೆ ಭಾರತ ಸರ್ಕಾರ ದಾಳಿ ಮಾಡಬೇಕೆಂದು ಆಕ್ರೋಶಭರಿತರಾಗಿ ಆಗ್ರಹಿಸುತ್ತಿದ್ದಾರೆ.


