ಸಿ ಎ ಸುಬ್ರಹ್ಮಣ್ಯ ನಿಧನರಾಗಿಲ್ಲ, ಬ್ರೈನ್ ಡೆತ್ ಆಗಿದೆ:ವೈದ್ಯರ ಸ್ಪಷ್ಟನೆ

ಇಂದು ಬೆಳಿಗ್ಗೆ ನಿಧನರಾಗಿದ್ದಾರೆಂದು ಪ್ರಚಾರ ಆಗಿದ್ದ ಸಿ ಎ ಸುಬ್ರಹ್ಮಣ್ಯ ಅವರು ನಿಧನರಾಗಿಲ್ಲ, ಈಗಲೂ ಕೋಮಾ ಸ್ಥಿತಿಯಲ್ಲೇ ಇದ್ದು ಬ್ರೈನ್ ಡೆತ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಅವರನ್ನು ಸುಳ್ಯ ಕೆವಿಜಿ ಹಾಸ್ಪಿಟಲಿಗೆ ವೆಂಟಿಲೇಟರ್ ಆಂಬುಲನ್ಸ್ ನಲ್ಲಿ ಕರೆತರಲಾಗುತ್ತಿದ್ದು ಗಂಭೀರ ಸ್ಥಿತಿಯಲ್ಲೇ ಇದ್ದಾರೆ ಎಂದು ತಿಳಿದು ಬಂದಿದೆ.

ಎರಡು ದಿನಗಳ ಹಿಂದೆ ಸುಳ್ಯ ಚೆನ್ನಕೇಶವ ದೇವಸ್ಥಾನದ ಬಳಿ ತನ್ನ ಕಾರು ನಿಲ್ಲಿಸಿ ರಸ್ತೆ ದಾಟುವಾಗ ಸ್ಕೂಟಿಯೊಂದು ಡಿಕ್ಕಿ ಹೊಡೆದು ಬಿದ್ದು ತೀವ್ರ ರಕ್ತಸ್ರಾವಕ್ಕೊಳಗಾದಾಗ ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪ್ರಗತಿ ಆಂಬುಲನ್ಸ್ ನ  ಅಚ್ಚು  ಅವರು ತಕ್ಷಣವೇ ತಮ್ಮ ಆಟೋರಿಕ್ಷಾದಲ್ಲಿ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಗಂಭೀರ ಸ್ಥಿತಿಯಲ್ಲಿ‌ಇರುವ ಕಾರಣ ಮಂಗಳೂರಿಗೆ ಕರೆದುಕೊಂಡು ಹೋಗಲಾಗಿತ್ತು.

ಎರಡು ದಿನಗಳಿಂದ ಕೋಮಾದಲ್ಲೇ ಇದ್ದ ಸುಬ್ರಹ್ಮಣ್ಯ ಇಂದು ಬೆಳಿಗ್ಗೆ ನಿಧನರಾಗಿದ್ದಾರೆಂದು ಪ್ರಮುಖ ನ್ಯೂಸ್ ಸೈಟ್ ಗಳಲ್ಲಿ ಪ್ರಕಟಗೊಂಡು ನಂತರ ವೈದ್ಯಾಧಿಕಾರಿಗಳಿಂದ ಸ್ಪಷ್ಟನೆ ಬಂದು ಬ್ರೈನ್ ಡೆತ್ ಆಗಿದೆ ಇನ್ನೂ ವೆಂಟಿಲೇಟರ್ ನಲ್ಲೇ ಇದ್ದಾರೆ ಎಂಬ ಮಾಹಿತಿ ಬಂದಿತ್ತು.

ಇದೀಗ ಸುಳ್ಯಕ್ಕೆ ಕರೆತರಲು ಕೆವಿಜಿ ಆಂಬುಲನ್ಸ್ ತೆರಳಿದ್ದು ನಾಲಕ್ಕೂವರೆ ಘಂಟೆಗೆ ಎಜೆ ಆಸ್ಪತ್ರೆಯಿಂದ ಸುಳ್ಯ ಆಸ್ಪತ್ರೆಗೆ ಕರೆತರಲಾಗುವುದು ಎಂದು ತಿಳಿದು ಬಂದಿದೆ.

Leave a Reply

Discover more from

Subscribe now to keep reading and get access to the full archive.

Continue reading