ಮಾಣಿ : ಇಲ್ಲಿನ ಸೂರಿಕುಮೇರು ಜಂಕ್ಷನ್ ಸಮೀಪದಲ್ಲಿ ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಪ್ರತಿಭಾವಂತೆಯಾಗಿರುವ ಬಾಲಕಿ ನೈರುತಿ ಎಂ ಸುವರ್ಣ(10) ಮೃತಪಟ್ಟಿರುತ್ತಾಳೆ.

ಬಾಳ್ತಿಲ ಗ್ರಾಮದ ನಿವಾಸಿ ಹೇಮಂತ್ ಎಂಬವರ ಪುತ್ರಿಯಾಗಿರುವ ನೈರುತಿ ಪ್ರತಿಭಾವಂತೆಯಾಗಿದ್ದಳು,ತಂದೆ ಮತ್ತು ತಾಯಿಯೊಂದಿಗೆ ಬುಧವಾರ ಸಂಜೆ ವೇಳೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬರುವಾಗ ಸೂರಿಕುಮೇರು ಸಮೀಪಿಸುತ್ತಿರುವಾಗಲೇ ಇನ್ನೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದ್ದು ಕಾಂಕ್ರೀಟ್ ರಸ್ತೆಗೆಸೆಯಲ್ಪಟ್ಟ ನೈರುತಿಯ ತಲೆ ಭಾಗಕ್ಕೆ ಗಂಭೀರ ಪೆಟ್ಟು ತಗುಲಿರುವುದರಿಂದ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ವೇಳೆ ಮರಣಹೊಂದಿರುತ್ತಾಳೆ.

ಈ ಪುಟಾಣಿ ಬಾಲಕಿಯ ಸಾವಿಗೆ ಇಡೀ ಬಾಳ್ತಿಲ ಮತ್ತು ಮಾಣಿ ಗ್ರಾಮದ ಜನರು ದುಖತಪ್ತರಾಗಿದ್ದರು.ಬಂಟ್ವಾಳ ಸಂಚಾರ ಠಾಣೆ ಪೋಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.



