ಹಲವರ ಕಷ್ಟಕಾರ್ಪಣ್ಯಗಳಿಗೆ ಪರಿಹಾರ ಒದಗಿಸಿದ ಅಬ್ದುರಿಯಾಝ್ ಜುಮಾ ಮಸ್ಜಿದ್ ಎಲಿಮಲೆ ಸುಳ್ಯ ಇಲ್ಲಿ ಸಯ್ಯದ್ ಮುಹ್ಸಿನ್ ತಂಙಳ್ ಎಲಿಮಲೆ ನೇತೃತ್ವದಲ್ಲಿ ಬಹಳ ಕಾಲದಿಂದ ನಡೆದುಕೊಂಡು ಬರುತ್ತಿರುವ ಮಾಸಿಕ ಸ್ವಲಾತ್ ಪ್ರಾರ್ಥನಾ ಮಜ್ಲಿಸ್ ಕಾರ್ಯಕ್ರಮ ಏರ್ಪಾಡಾಗಿದೆ.

ಈ ಕಾರ್ಯಕ್ರಮವು 2026 ರ ಜೂನ್ 05 ರ ಶುಕ್ರವಾರದಂದು ಮಗ್ರಿಬ್ ನಮಾಜಿನ ಬಳಿಕ ಸುಳ್ಯ ತಾಲೂಕಿನ ಪ್ರಮುಖ ಅಬ್ದುರ್ರಿಯಾಝ್ ಜುಮಾ ಮಸ್ಜಿದ್ ಎಲಿಮಲೆ ಇಲ್ಲಿ ಪ್ರತಿ ತಿಂಗಳು ನಡೆಯುವಂತೆ ನಡೆಯಲಿದೆ.
ಎಲಿಮಲೆಯ ಮುದರ್ರಿಸ್ ಆದ ಸಯ್ಯಿದ್ ಮುಹ್ಸಿನ್ ಸಯ್ಯಿದಲವಿ ಕೋಯ ತಂಙಳ್ ಅವರು ಈ ಧಾರ್ಮಿಕ ಕಾರ್ಯಕ್ರಮದ ನೇತೃತ್ವವನ್ನು ವಹಿಸಲಿದ್ದಾರೆ. ರಫೀಖ್ ಸಖಾಫಿ ಮಡಿಕೇರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ.

ಕಾರ್ಯಕ್ರಮಕ್ಕೆ ಬರುವ ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶದ ವ್ಯವಸ್ಥೆಯನ್ನು ಮಾಡಲಾಗಿದ್ದು, ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಣೆ ಇರಲಿದೆ.




