ಮೊಬೈಲ್ ನೋಡಬೇಡ ಎಂದಿದ್ದಕ್ಕೆ ಬೇಸತ್ತು ಮನೆ ಬಿಟ್ಟು ಹೋದ ಬಾಲಕ: ಪತ್ತೆಯಾದರೆ ಮಾಹಿತಿ ನೀಡಲು ವಿನಂತಿ

ಸುಳ್ಯ: ಮೊಬೈಲ್ ಬಳಸದಂತೆ ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಬೇಸತ್ತು 16 ವರ್ಷದ ಬಾಲಕನೊಬ್ಬ ಮನೆ ಬಿಟ್ಟು ಹೋಗಿ ನಾಪತ್ತೆಯಾಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ.

ನಾಪತ್ತೆಯಾದ ಬಾಲಕನನ್ನು ಸುಳ್ಯ ಕಸಬಾ ಗ್ರಾಮದ ಬೋರುಗುಡ್ಡೆ ನಿವಾಸಿ ಸೈಯದ್ ಗೌಸ್ (16 ವರ್ಷ) ಎಂದು ಗುರುತಿಸಲಾಗಿದೆ.ಬಾಲಕನಿಗೆ ಮೊಬೈಲ್ ನೋಡದಂತೆ ಮನೆಯವರು ತಿಳಿಹೇಳಿದ್ದರು ಎನ್ನಲಾಗಿದೆ. ಇದರಿಂದ ಮನಸ್ತಾಪಗೊಂಡ ಬಾಲಕನು ಯಾರಿಗೂ ತಿಳಿಸದೆ ಮನೆಯಿಂದ ಹೊರಟು ಹೋಗಿದ್ದು, ಇದುವರೆಗೆ ಪತ್ತೆಯಾಗಿಲ್ಲ.

ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮೇಲಿರುವ ಚಿತ್ರದ ಅಥವಾಗೌಸ್ ಹೆಸರಿನ ಬಾಲಕನು ಎಲ್ಲಿಯಾದರೂ ಕಂಡುಬಂದಲ್ಲಿ ಅಥವಾ ಆತನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ತಕ್ಷಣವೇ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕಾಗಿ ಕುಟುಂಬಸ್ಥರು ಮತ್ತು ಸ್ಥಳೀಯರು ವಿನಂತಿಸಿದ್ದಾರೆ.

ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ:  7406393270

 

Leave a Reply

Discover more from

Subscribe now to keep reading and get access to the full archive.

Continue reading