ಜೆಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ಹಲವು ಪ್ರಶಸ್ತಿಗಳು

44ನೇ ವರ್ಷದ ಇತಿಹಾಸ ಇರುವ ಜೇಸಿಐ ಸುಳ್ಯ ಪಯಸ್ವಿನಿ ಘಟಕ್ಕಕ್ಕೆ ಜೇಸಿಐ ಮಧ್ಯಂತರ ಸಮ್ಮೇಳನ(MIDCON)ನಲ್ಲಿ ಡೈಮಂಡ್ ಘಟಕ ಪ್ರಶಸ್ತಿ ಯೊಂದಿಗೆ, ಔಟ್ ಸ್ಟಾಂಡಿಂಗ್ ಘಟಕ ಪ್ರಶಸ್ತಿ, ಮೌರ್ಯ ದಳಪತಿ ಅವಾರ್ಡ್ ಗಳ ಸುರಿಮಳೆ ಲಭಿಸಿದೆ

ಘಟಕದ ವೈಯಕ್ತಿಕ ಅಭಿವೃದ್ಧಿ, ಸಮುದಾಯ ಸೇವೆ, ಮತ್ತು ನಾಯಕತ್ವ ಕ್ಷೇತ್ರಗಳಲ್ಲಿನ ಅತ್ಯುತ್ತಮ ಸಂಘಟನೆ ಹಾಗೂ ಸಾಧನೆಗಾಗಿ ಹಲವು ಪ್ರಶಸ್ತಿಗಳನ್ನು ಇಂದು ಕಾಪುವಿನ ಇನಾಸನ್ ಸಭಾಂಗಣದಲ್ಲಿ ನಡೆದ ವಲಯ ಮಟ್ಟದ ಮಧ್ಯಂತರ ಸಮ್ಮೇಳನದಲ್ಲಿ ವಲಯಾಧ್ಯಕ್ಷರಾದ ಜೆ.ಎಫ್. ಎಸ್‌. ಸಂತೋಷ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳ ಮನ್ನಣೆಯನ್ನು ಘಟಕಾಧ್ಯಕ್ಷರಾದ ಜೆ.ಎಫ್.ಎಂ. ಲತಾಶ್ರೀ ಸುಪ್ರೀತ್ ಮೋಂಟಡ್ಕರವರ ತಂಡ ಪಡೆದುಕೊಂಡಿದ್ದಾರೆ‌.


ರೀಜನ್ ಬಿ ವಲಯಮಟ್ಟದ ಜೇಸಿಐ ಔಟ್ ಸ್ಟಾಂಡಿಂಗ್ ಘಟಕ ದಲ್ಲಿ ರನ್ನರ್ ಆಫ್, ಔಟ್ ಸ್ಟಾಂಡಿಂಗ್ ಪ್ರೆಸಿಡೆಂಟ್ ದ್ವಿತೀಯ ಪ್ರಶಸ್ತಿ, ಡೈಮಂಡ್ ಘಟಕ ಪ್ರಶಸ್ತಿಯೊಂದಿಗೆ
ಘಟಕದಿಂದ ಆಯೋಜಿಸಿದ್ದ
ರಕ್ತದಾನ ಶಿಬಿರ, ಕಾಬಿಲ್ ಸ್ಕಿಲ್ ಡೆವಲಪ್ಮೆಂಟ್ ಕಾರ್ಯಕ್ರಮ, ಧಾನ್ ಕಾರ್ಯಕ್ರಮ, ಕಾರ್ಮಿಕ ದಿನಾಚರಣೆ ಕಾರ್ಯಕ್ರಮ, ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮಗಳಿಗೆ ಮನ್ನಣೆ ದೊರೆತ್ತಿರುತ್ತದೆ.


ಘಟಕಾಧ್ಯಕ್ಷರು ಜೇಸಿಐ ಇಂಡಿಯಾಕ್ಕೆ ದೇಣಿಗೆಯನ್ನು ನೀಡುವುದರೊಂದಿಗೆ ಜೆ.ಎಫ್.ಎಂ ಹಾಗೂ ಕಾರ್ಯದರ್ಶಿ ಹೆಚ್.ಜಿ.ಎಫ್ ಬಿರುದಿನೊಂದಿಗೆ
ಮೌರ್ಯ ದಳಪತಿ ಪುರಸ್ಕಾರ ಹಾಗೂ
ತನ್ನ ಘಟಕದಲ್ಲಿ 5% ಸದಸ್ಯತನವನ್ನು ಹೆಚ್ಚಿಸಿರುವುದರಿಂದ ವಲಯ ಉಪಾಧ್ಯಕ್ಷಾದ ಸೆನೆಟರ್ ಜಿತೇಶ್ ಪಿರೇರಾ ರವರ ಮನ್ನಣೆಗೂ ಲತಾಶ್ರೀ ಸುಪ್ರೀತ್ ಮೋಂಟಡ್ಕ ಭಾಜನರಾಗಿದ್ದಾರೆ.
ಅಂತೆಯೇ ವಲಯ ಮಟ್ಟದಲ್ಲಿ ಆಯೋಜಿಸಿದ್ದ ವಿಡಿಯೋ (ರೀಲ್ಸ್) ಸ್ಪರ್ಧೆಯಲ್ಲಿ ಘಟಕವು ದ್ವಿತೀಯ ಸ್ಥಾನವನ್ನು ಗಳಿಸಿರುತ್ತದೆ.


ಈ ಸಂದರ್ಭದಲ್ಲಿ ಪೂರ್ವಾಧ್ಯಕ್ಷರಾದ ಜೇಸಿ. ಹೆಚ್.ಜಿ.ಎಪ್. ಗುರುರಾಜ್ ಅಜ್ಜಾವರ, ಜೇಸಿ. ಹೆಚ್.ಜಿ.ಎಪ್. ನವೀನ್ ಕುಮಾರ್, ನಿಕಟಪೂರ್ವಾಧ್ಯಕ್ಷರಾದ ಜೆ.ಎಫ್.ಎಂ. ಸುರೇಶ್ ಕಾಮತ್, ಕಾರ್ಯದರ್ಶಿ ಜೇಸಿ. ಹೆಚ್.ಜಿ.ಎಪ್. ತಾರಾ ಮಾದವ ಚೂಂತಾರು, ಜತೆ ಕಾರ್ಯದರ್ಶಿ ಜೇಸಿ. ವಿನೋದ್ ಮೂಡಗದ್ದೆ,
ಸದಸ್ಯರಾದ ಜೇಸಿ.ಉಮೇಶ್ ಬೊಳುಗಲ್ಲು, ಜೇಸಿ. ಮಹೇಶ್ ಮೇರ್ಕಜೆ, ಜೇಸಿ. ಪ್ರಶಾಂತ್ ಅಂಬೆಕಲ್ಲು, ಜೇಸಿ. ಸತ್ಯ ಶಾಂತಿ ತ್ಯಾಗ ಮೂರ್ತಿ, ಮುಖಂಡರಾದ ಸುಪ್ರೀತ್ ಮೋoಟಡ್ಕ ಇವರುಗಳ ತಂಡ ಭಾಗವಹಿಸಿದರು.

Leave a Reply

Discover more from

Subscribe now to keep reading and get access to the full archive.

Continue reading