ಮಂಡೆಕೋಲಿನಲ್ಲಿ ಯಶಸ್ವಿಯಾಗಿ ನಡೆದ ಸ್ಪೂರ್ತಿ(ಕರುತ್ತ್) ಕಾರ್ಯಕ್ರಮ.

SKSSF ಕೇಂದ್ರ ಸಮೀತಿಯ ನಿರ್ದೇಶನದಂತೆ SKSSF ಮಂಡೆಕೋಲು ಶಾಖೆಯ ವತಿಯಿಂದ ಸ್ಫೂರ್ತಿ(ಕರುತ್ತ್) ಕಾರ್ಯಕ್ರಮವು ದಿನಾಂಕ 24/05/2026 ರ ಆದಿತ್ಯವಾರ ಅಸ್ತಮಿಸಿದ ಸೋಮವಾರ ರಾತ್ರಿ ಮಗ್ರಿಬ್ ನಮಾಜಿನ ಬಳಿಕ ಮುಹಿಯದ್ದೀನ್ ಜುಮಾ ಮಸೀದಿ ಮಾರ್ಗ ಮಂಡೆಕೋಲು ಇದರ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವು 4 ಸೆಷನ್ಗಳಲ್ಲಾಗಿ ಬಹಳ ಯಶಸ್ವಿಯಾಗಿ ನಡೆಯಿತು.ಜಮಾಹತ್ ಖತೀಬರಾದ ಶಮೀಮ್ ಅರ್ಶದಿ ಉಸ್ತಾದರು ದುಆ ನೆರವೇರಿಸಿ ಕಾರ್ಯಕ್ರಮ ಉದ್ಘಾಟನೆಗೈದರು. ಶಾಖಾ ಪ್ರಧಾನ ಕಾರ್ಯದರ್ಶಿಯವರು ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ನೆರವೇರಿಸಿದರು. ಮೊದಲ ಸೆಶನ್ ನಲ್ಲಿ ಸಂಘಟನೆಯ ಉದಯ ಮತ್ತು ನೂರು ವರ್ಷಗಳನ್ನು ಪೂರೈಸಿ ಮುಂದಿನ ನೂರು ವರ್ಷಗಳ ಮಹತ್ತರ ಯೋಜನೆಗಳೊಂದಿಗೆ ಮುನ್ನಡೆಯುತ್ತಿರುವ ಸಮಸ್ತ ಕೇರಳ ಜಮ್ ಇಯ್ಯತುಲ್ ಉಲಮಾ ಮತ್ತು ಅದರ ವಿದ್ಯಾರ್ಥಿ ಸಂಘಟನೆಯಾದ SKSSFನ ಉದಯ ಅದರ ಸ್ಥಾಪಕರು ಅದನ್ನು ಮುನ್ನಡೆಸಿದ ರೀತಿ SKSSF ನಮಗೆ ಯಾಕೆ ಬೇಕು ಮುಂಬರುತ್ತಿರುವ membershi campign ಗಳ ಬಗ್ಗೆ ಉಸ್ತಾದ್ ಅಹ್ಮದ್ ನಹೀಮ್ ಫೈಝಿ ಯವರು ಸವಿಸ್ತಾರವಾಗಿ ವಿವರಿಸಿದರು.

2ನೇ ಸೆಷನಲ್ಲಿ ಆಧ್ಯಾತ್ಮಿಕತೆ ಎಂಬ ವಿಷಯವನ್ನು ಮುಂದಿಟ್ಟು ಮುಹಮ್ಮದ್ ಶಮೀಮ್ ಅರ್ಶದಿ ಉಸ್ತಾದರು ನಡೆಸಿದ ತರಗತಿಯು ಸಭೀಕರ ಕಣ್ಣುಗಳನ್ನು ತೇವಗೊಳಿಸಿತು. ಮೂರನೇ ಸೆಷನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಅವಾರ್ಡ್ ವಿತರಣೆಯನ್ನು ಮಾಡಲಾಯಿತು. ಕೊನೆಯ ಮತ್ತು ನಾಲ್ಕನೇ ಸೆಷನಲ್ಲಿ ಕಾರ್ಯಕರ್ತರನ್ನು ಮೂರು ತಂಡಗಳನ್ನಾಗಿಸಿ ಸ್ಥಳೀಯ ಸಮಸ್ಯೆಗಳು ಮತ್ತು ಅದಕ್ಕಿರುವ ಪರಿಹಾರಗಳ ಬಗ್ಗೆ ಗುಂಪು ಚರ್ಚೆಯನ್ನು ಮಾಡಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ತಹ್ಲೀಲ್ ಹೇಳಿ ಅಗಲಿದ ಸಮಸ್ತ ನೇತಾರರಿಗೆ ಮತ್ತು ನಮ್ಮಿಂದ ಅಗಲಿದವರಿಗಾಗಿ ಅದಿಯ ಮಾಡಿ ದುಆ ಮಾಡಲಾಯಿತು. ಕಾರ್ಯಕ್ರಮದ ಮದ್ಯದಲ್ಲಿ ಚಾ ಹಾಗೂ ತಿಂಡಿ ವಿತರಣೆ ಹಾಗೆ ಕೊನೆಯಲ್ಲಿ ತಬರುಕ್ ವಿತರಣೆಯನ್ನು ಮಾಡಲಾಯಿತು.

Leave a Reply

Discover more from

Subscribe now to keep reading and get access to the full archive.

Continue reading