22 ವರ್ಷದ ಯುವತಿಗೆ ಆರನೇ ಮಗುವಿನ ನಿರೀಕ್ಷೆಯಲ್ಲಿರುವ ದಂಪತಿ: ಗಂಡು ಮಗುವಿನ ಹಂಬಲ

ಆರನೇ ಬಾರಿಗೆ ಗರ್ಭಿಣಿಯಾಗಿರುವ 22 ವರ್ಷದ ಯುವತಿ ಮತ್ತು ಪತಿಗೆ ಡಾಕ್ಟರ್ ಉಪದೇಶಿಸುವ ಒಂದು ವಿಡಿಯೋ ವೈರಲ್ ಆಗಿದೆ. ರಾಜಸ್ಥಾನದವರಾದ ಈ ದಂಪತಿಗಳಿಗೆ 15 ವರ್ಷ ವಯಸ್ಸಾಗಿದ್ದಾಗ ಮದುವೆಯಾಗಿದೆ. ಇವರಿಗೆ ಈಗಾಗಲೇ ಐದು ಜನ ಮಕ್ಕಳಿದ್ದಾರೆ. ಇದರಲ್ಲಿ ನಾಲ್ಕು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದಾನೆ. ಆದರೆ, ಮತ್ತೊಬ್ಬ ಗಂಡು ಮಗುವಾಗಬಹುದು ಎಂಬ ನಿರೀಕ್ಷೆಯಿಂದ ಇವರು ಮತ್ತೆ ಗರ್ಭ ಧರಿಸಿದ್ದಾರಂತೆ. ಯುವತಿ ಮತ್ತು ಪತಿಯ ಸಮ್ಮತಿಯೊಂದಿಗೇ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗುತ್ತಿದೆ ಎಂದು ಸ್ಪಂದನ್ ಆಸ್ಪತ್ರೆಯ ಗೈನಕಾಲಜಿಸ್ಟ್ (ಸ್ತ್ರೀರೋಗ ತಜ್ಞೆ) ಡಾ. ಪ್ರಗ್ಯಾ ತೋಮರ್ ಹೇಳಿದ್ದಾರೆ.

‘ನನಗೆಲ್ಲಾ ಹೆಣ್ಣುಮಕ್ಕಳೇ ಹುಟ್ಟುತ್ತಿದ್ದಾರೆ. ನಮಗೆ ಒಬ್ಬ ಗಂಡು ಮಗನಿದ್ದಾನೆ. ಮತ್ತೊಬ್ಬ ಗಂಡು ಮಗು ಕೂಡ ಬೇಕು’ ಎಂಬುದು ನನ್ನ ಆಸೆ ಎಂದು ಯುವತಿ ವೈದ್ಯರ ಬಳಿ ಹೇಳುತ್ತಾಳೆ. ‘ಕುಟುಂಬಕ್ಕೆ ಆಸರೆಯಾಗಲು ಮತ್ತು ವಂಶವನ್ನು ಮುಂದುವರಿಸಲು ಒಬ್ಬ ಗಂಡು ಮಗ ಸಾಲದು’ ಎಂಬುದು ಆಕೆಯ ಪತಿಯ ವಾದ. ಅದಕ್ಕಾಗಿಯೇ ಅವರು ಮತ್ತೊಬ್ಬ ಗಂಡು ಮಗು ಬೇಕು ಎಂದು ಬಯಸುತ್ತಿದ್ದಾರಂತೆ. ಈ ವಿಡಿಯೋ ಭಾರಿ ಚರ್ಚೆಗೆ ಕಾರಣವಾಗಿದೆ. ಇಂದಿನ ಕಾಲದಲ್ಲೂ ಕುಟುಂಬವನ್ನು ನೋಡಿಕೊಳ್ಳಲು ಮತ್ತು ಮುನ್ನಡೆಸಲು ಹೆಣ್ಣುಮಕ್ಕಳು ಸಾಲದು, ಗಂಡುಮಕ್ಕಳೇ ಬೇಕು ಎಂಬ ಮನಸ್ಥಿತಿ ಮುಂದುವರಿದಿರುವುದರ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದೇ ಸಮಯದಲ್ಲಿ, ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಈ ರೀತಿ ಪದೇ ಪದೇ ಗರ್ಭ ಧರಿಸುವುದರಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯರು ದಂಪತಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ತನಗೆ ಉಸಿರಾಟದ ತೊಂದರೆ, ತಲೆಸುತ್ತು ಮತ್ತು ಮೈಕೈ ನೋವು ಇರುವುದಾಗಿ ಯುವತಿ ಹೇಳಿದ್ದಾಳೆ. ಈ ಲಕ್ಷಣಗಳು ಸಾಮಾನ್ಯವಾಗಿ ಆಯಾಸ, ರಕ್ತಹೀನತೆ ಮತ್ತು ಅಪೌಷ್ಟಿಕತೆಗೆ ಸಂಬಂಧಿಸಿದ್ದಾಗಿವೆ. ನೀವು ನಿಮ್ಮ ಪ್ರಾಣವನ್ನೇ ಅಪಾಯಕ್ಕೆ ಸಿಲುಕಿಸುತ್ತಿದ್ದೀರಿ ಹಾಗೂ ಇದು ತಾಯಿ ಮತ್ತು ಮಗು ಇಬ್ಬರಿಗೂ ಸಮಸ್ಯೆ ತಂದೊಡ್ಡಬಹುದು ಎಂದು ವೈದ್ಯರು ದಂಪತಿಗಳಿಗೆ ಎಚ್ಚರಿಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading