ಎಣ್ಮೂರು ಹಿದಾಯತುಸ್ಸಿಬಿಯಾನ್ ಮದ್ರಸಾ: ಸುನ್ನೀ ಬಾಲ ಸಂಘ (SBS) ನೂತನ ಸಮಿತಿ ಅಸ್ತಿತ್ವಕ್ಕೆ
ಎಣ್ಮೂರು: ಇಲ್ಲಿನ ಹಿದಾಯತುಸ್ಸಿಬಿಯಾನ್ ಮದ್ರಸಾದ ಸುನ್ನೀ ಬಾಲ ಸಂಘ (SBS) ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಜರುಗಿತು.

ಮದ್ರಸಾ ಮುಖ್ಯೋಪಾಧ್ಯಾಯರಾದ ಸಲ್ಮಾನ್ ಹಿಮಮಿ ಎಲಿಮಲೆ, ಅಧ್ಯಾಪಕರುಗಳಾದ ಅಬ್ದುಲ್ಲಾ ಮದನಿ ಉಸ್ತಾದ್ ಹಾಗೂ ಅಬ್ದುಲ್ ರಹ್ಮಾನ್ ಹನೀಫಿ ಉಸ್ತಾದ್ ಅವರ ನೇತೃತ್ವದಲ್ಲಿ ನಡೆದ ಈ ಮಹಾಸಭೆಯಲ್ಲಿ ಹಳೆಯ ಸಮಿತಿಯನ್ನು ಬರ್ಕಾಸ್ತುಗೊಳಿಸಿ, ಮುಂಬರುವ ಸಾಲಿಗಾಗಿ ನೂತನ ಪದಾಧಿಕಾರಿಗಳ ಸಮಿತಿಯನ್ನು ರಚಿಸಲಾಯಿತು.

ನೂತನ ಸಮಿತಿಯ ವಿವರಗಳು:
ಅಧ್ಯಕ್ಷರು: ಮುಹಮ್ಮದ್ ಶಾನಿಫ್
ಉಪಾಧ್ಯಕ್ಷರು: ಮುಸ್ತಫಾ
ಪ್ರಧಾನ ಕಾರ್ಯದರ್ಶಿ: ಅನಸ್
ಕೋಶಾಧಿಕಾರಿ: ಮನಾಸ್
ಕಾರ್ಯದರ್ಶಿಗಳು: ಅಬ್ದುಲ್ ರಾಝಿಕ್, ಅಫ್ಲಹ್ ಶಾದ್, ಅನ್ಸಾಫ್
ಮದ್ರಸಾ ಲೀಡರ್ಸ್: ಅಸ್ಲಂ, ಸೈಫುದ್ದೀನ್
ಮುಶ್ರಿಫಾ: ಅಫ್ನಾ, ತಸ್ನೀಮ್
ಗ್ರೂಪ್ ಲೀಡರ್ಸ್: ಅಬ್ದುಲ್ ರಾಝಿಕ್, ಮನಾಸ್, ಅನೂಫಾ, ಇಫ್ರತ್
ಮದ್ರಸಾದ ವಿದ್ಯಾರ್ಥಿಗಳ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ಈ ನೂತನ ಸಮಿತಿಯು ಕಾರ್ಯನಿರ್ವಹಿಸಲಿದೆ ಎಂದು ಸಭೆಯಲ್ಲಿ ಆಶಯ ವ್ಯಕ್ತಪಡಿಸಿ, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಲಾಯಿತು.


