ಮುಖ್ಯಮಂತ್ರಿಯ ಪ್ರಮಾಣವಚನ ನೋಡಲು ಆ ಮಾತೆ ತಲುಪಿದ್ದಳು

ಕೇರಳದ ಪರವೂರಿನ ನಿವಾಸಿಯಾದ ಅಮ್ಮಾಳು ಅಮ್ಮ ಅಲಿಯಾಸ್ ಸೀತಾಲಕ್ಷ್ಮಿ ಅಮ್ಮಾಳ್ ಅವರು ತಿರುವನಂತಪುರಕ್ಕೆ ಬಂದಿದ್ದು ಎರಡು ಆಸೆಗಳೊಂದಿಗೆ.


ತಮ್ಮ ಮಗ ವಿ. ಡಿ. ಸತೀಶನ್ ಅವರ ಪ್ರಮಾಣ ವಚನ ಸ್ವೀಕಾರಕ್ಕೆ ಸಾಕ್ಷಿಯಾಗುವುದು ಮತ್ತು ಅವರನ್ನೊಮ್ಮೆ ಆಲಂಗಿಸಿಕೊಳ್ಳುವುದು. ಈಗ ತಮ್ಮ ಆಸೆ ಈಡೇರಿದ ಸಂತೋಷದೊಂದಿಗೆ ಅಮ್ಮಾಳು ಅಮ್ಮ ಹಿಂದಿರುಗುತ್ತಿದ್ದಾರೆ. ವಿ. ಡಿ. ಸತೀಶನ್ ಅವರೊಂದಿಗೆ ರಾಹುಲ್ ಗಾಂಧಿ ಅವರನ್ನೂ ವೇದಿಕೆಯಲ್ಲಿ ಅಪ್ಪಿಕೊಳ್ಳಲು ಅವರಿಗೆ ಸಾಧ್ಯವಾಯಿತು. ವಿ. ಡಿ. ಸತೀಶನ್ ಅವರೊಂದಿಗಿರುವ ಚಿತ್ರವನ್ನು ಕೈಯಲ್ಲಿ ಹಿಡಿದು ಸಭೆಯಲ್ಲಿ ನಿಂತಿದ್ದ ಅಮ್ಮಾಳು ಅಮ್ಮ ಅವರ ಬಗ್ಗೆ ಬೆಳಿಗ್ಗೆಯೇ ಮಾಧ್ಯಮದವರು ಸುದ್ದಿಯ ಮೂಲಕ ಹೊರಜಗತ್ತಿಗೆ ತಿಳಿಸಿದ್ದರು.

ಇದನ್ನು ಗಮನಿಸಿದ ಮುಖ್ಯಮಂತ್ರಿಯವರ ಸಿಬ್ಬಂದಿ ವರ್ಗದವರು ಅವರನ್ನು ವೇದಿಕೆಗೆ ಕರೆತಂದರು. ಪ್ರವಾಹದ ಸಮಯದಲ್ಲಿ ಕೈಹಿಡಿದು ನಡೆಸಿದ್ದ, ಅಂದಿನ ಪರವೂರ್ ಎಂ.ಎಲ್.ಎ ಆಗಿದ್ದ ಇಂದಿನ ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರೇ ಸೀತಾಲಕ್ಷ್ಮಿ ಅಮ್ಮಾಳ್ ಅವರಿಗೆ ‘ಅಮ್ಮಾಳು ಅಮ್ಮ’ ಎಂದು ಹೆಸರಿಟ್ಟಿದ್ದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅಮ್ಮಾಳು ಅಮ್ಮ ಅವರ ಬಳಿ, “ವಿ. ಡಿ. ಸತೀಶನ್ ಅವರು ನಿಮಗೆ ಮಗನ ತರಹನಾ?” ಎಂದು ಮಾಧ್ಯಮದವರು ಪ್ರಶ್ನಿಸಿದಾಗ, “ಅವರು ನನ್ನ ಸ್ವಂತ ಮಗನೇ” ಎಂದು ಉತ್ತರಿಸಿದ್ದರು. ಸ್ವಂತ ಮಕ್ಕಳಿಲ್ಲದ ಅಮ್ಮಾಳು ಅಮ್ಮ, ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರನ್ನು ತಮ್ಮದೇ ಸ್ವಂತ ಮಗನಂತೆ ನೋಡುತ್ತಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading