ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (SJM) ರಾಜ್ಯ ಸಮಿತಿ ಆಯೋಜಿಸಿರುವ ಮದ್ರಸಾ ಮಟ್ಟದ ‘Be friend Summer Camp’ ಹಿದಾಯತುಸ್ಸಿಬಿಯಾನ್ ಮದ್ರಸಾ ಎಣ್ಮೂರು, ಐವತ್ತೊಕ್ಲು ವಿನಲ್ಲಿ ಮೇ 17 ಆದಿತ್ಯವಾರ ರಂದು ಅತೀವ ವಿಜೃಂಭಣೆಯಿಂದ ನಡೆಯಿತು.

ಮದ್ರಸಾ ಸದರ್ ಉಸ್ತಾದರಾದ ಸಲ್ಮಾನ್ ಹಿಮಮಿ ಎಲಿಮಲೆ ನೇತೃತ್ವದಲ್ಲಿ ABC Class Room ಮತ್ತು ಮದ್ರಸಾ, ಮಸೀದಿ ವಠಾರ ಸ್ವಚ್ಚತಾ ಅಭಿಯಾನ ನಡೆಯಿತು. ವಿದ್ಯಾರ್ಥಿಗಳಿಗೆ ತಯಮ್ಮುಮ್ ಪ್ರಾಕ್ಟಿಕಲ್ ತರಬೇತಿಗೆ ರಹ್ಮಾನಿಯಾ ಕೇಂದ್ರ ಜುಮಾ ಮಸೀದಿ ಎಣ್ಮೂರು ಖತೀಬರಾದ ಬಹು! ಅಲ್ ಹಾಜ್ ಅಬ್ದುಲ್ಲಾ ಮದನಿ ಉಸ್ತಾದರು ನೇತೃತ್ವ ವಹಿಸಿದರು. ಅಬ್ದುಲ್ ರಹ್ಮಾನ್ ಹನೀಫಿ ಉಸ್ತಾದ್ ಕಾರ್ಯಕ್ರಮವನ್ನು ಪ್ರಾರ್ಥಿಸಿ ವಂದಿಸಿದರು.



